Publish Date: Thu, 11 Nov 2021 (14:20 IST)
Updated Date: Thu, 11 Nov 2021 (14:25 IST)
ಬಿಟ್ ಕಾಯಿನ್ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಸುಳ್ಳಾ? ಎರಡು ಪಕ್ಷದ ರಾಜಕಾರಣಿಗಳ ನಿದ್ದೆ ಗೆಡಿಸಿರುವ ಬಿಟ್ ಕಾಯಿನ್ ಅಕ್ರಮದ ನಡೆದಿರುವ ಬೆಳವಣಿಗೆ ನೋಡಿದರೆ ಇಂತಹ ಅನುಮಾನ ಹುಟ್ಟು ಹಾಕಿದೆ.ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸೇರಿದಂತೆ ಹಲವರಿಂದ ಹೇಳಿಕೆ ದಾಖಲಿಸಿಕೊಂಡಿದೆ
geetha
Publish Date: Thu, 11 Nov 2021 (14:20 IST)
Updated Date: Thu, 11 Nov 2021 (14:25 IST)