Publish Date: Fri, 19 Jul 2019 (19:13 IST)
Updated Date: Fri, 19 Jul 2019 (19:15 IST)
ಗ್ರಾಮಸ್ಥರು ತಮಗೆ ಅನುಮಾನ ಬಂದಿದೆ ಅಂತ ಮೂವರು ವ್ಯಕ್ತಿಗಳನ್ನು ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
ಗ್ರಾಮಸ್ಥರು ನಡೆಸಿದ ಹಲ್ಲೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಮಾರಕಾಸ್ತ್ರಗಳಿಂದ ವಾಹನವೊಂದರ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿರೋ ಗ್ರಾಮಸ್ಥರು, ವಾಹನದಲ್ಲಿದ್ದವರನ್ನು ಕಳ್ಳರೆಂದು ಭಾವಿಸಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಬಿಹಾರದ ಪಾಟ್ನಾದ ಚಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ವಾಹನದಲ್ಲಿ ಬಂದವರು ಕಳ್ಳರು ಅಂತ ಭಾವಿಸಿ ಜನರು ಹಲ್ಲೆ ನಡೆಸಿ ಕೊಂದಿದ್ದಾರೆ. ಆದರೆ ಅವರು ಜಾನುವಾರುಗಳ ವ್ಯಾಪಾರಕ್ಕೆ ಆಗಮಿಸಿದ್ದರು ಎನ್ನಲಾಗಿದೆ.