ಆ ಪಕ್ಷಿ ಬೆಳ್ಳಂಬೆಳಗ್ಗೆ ಗಾಳಿಪಟದ ದಾರದಲ್ಲಿ ಸಿಲುಕಿ ನರಳಾಡುತ್ತಿತ್ತು. ಆ ಗಾಳಿಪಟದ ದಾರದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆ ಪಕ್ಷಿಗೆ ಮಾತ್ರ ಮುಕ್ತಿ ಸಿಕ್ಕಲಿಲ್ಲ. ಆ ಪಕ್ಷಿಯಾದ್ರು ಯಾವುದು…?
ಕಾಗೆಯೊಂದು ಬೆಳ್ಳಂಬೆಳಗ್ಗೆ ಗಾಳಿಪಟದ ದಾರದಲ್ಲಿ ಸಿಲುಕಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗಂಜಾಮ್ ಗ್ರಾಮದಲ್ಲಿ ನಲಗುತಿತ್ತು. ರಾತ್ರಿಯಿಡಿ ಗಾಳಿಪಟದ ದಾರದಲ್ಲಿ ಕಾಗೆ ರೆಕ್ಕೆ ಸಿಲುಕಿ ನರಳಾಡಿದೆ. ಬೆಳಿಗ್ಗೆ ವಾಕಿಂಗ್ ಹೋಗುವ ಸಂದರ್ಭದಲ್ಲಿ ಕಾಗೆಯ ನರಳಾಟ ನೋಡಿದ ಪಕ್ಷಿ ಪ್ರಿಯರು, ಕಾಗೆಯ ನರಳಾಟ ಕಂಡು ಕಾಗೆಯನ್ನು ಪಾರು ಮಾಡುಲು ಪ್ರಯತ್ನಿಸಿದರು.
ಪಕ್ಷಿ ಪ್ರಿಯರ ಸತತ ಪ್ರಯತ್ನದಿಂದ ಕಡೆಗೂ ದಾರದಲ್ಲಿ ಸಿಲುಕಿ ನರಳಾಡುತ್ತಿದ್ದ ಕಾಗೆಗೆ ಮುಕ್ತಿ ದೊರೆಯುವಂತೆ ಮಾಡಿದ್ರು. ದಾರದಿಂದ ಮುಕ್ತಿಗೊಂಡು ನಿತ್ರಾಣಗೊಂಡಿದ್ದ ಕಾಗೆ ಕೆಳಗೆ ಬಂದು ವಿಶ್ರಮಿಸಿ ನಂತರ ಮತ್ತೆ ಕಾಗೆ ಬಾನೆತ್ತರಕ್ಕೆ ಹಾರಿತು.