ಮಠಗಳಿಗೆ ಅನದಾನ ನೀಡಲು ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಅನ್ನೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜ್ ಮಾತನಾಡಿದ್ದಾರೆ. ಪರಮ ಪೂಜ್ಯರಾದವರು ಈ ರೀತಿ ಮಾತನಾಡಬಾರದು. ಸ್ವಾಮೀಜಿಗಳ ಹೇಳಿಕೆ ಶೋಭೆ ತರವಂತದ್ದಲ್ಲ. ಸ್ವಾಮೀಜಿಗಳು ಎಲ್ಲಿ ಕೊಟ್ಟಿದ್ದಾರೆ-ಯಾರಿಗೆ ಕೊಟ್ಟಿದ್ದಾರೆ ಅನ್ನೋದನ್ನ ಹೇಳಲಿ. ಎಲ್ಲ ಪೀಠಾಧಿಪತಿಗಳು ಸುಮ್ಮನಿದ್ದಾರೆ. ಆದರೆ ಇವರು ಮಾತ್ರ ಈ ರೀತಿ ಹೇಳ್ತಾ ಇದ್ದು, ಇವರ ಬಾಯಿಯಿಂದ ಹೇಳಿಸುವಂತ ಕೆಲಸವಾಗ್ತಿದೆ. ಸ್ವಾಮೀಜಿಗಳು ಈ ರೀತಿ ಮಾತನಾಡುವಂತೆ ಕಾಂಗ್ರೆಸ್ನವರು ಪ್ರೇರೇಪಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲದೆ, ಕಾಂಗ್ರೆಸ್ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ, ಕಚ್ಚಾಟ ಶುರುವಾಗಿದೆ ಎಂದ್ರು.