Publish Date: Thu, 15 Jul 2021 (15:19 IST)
Updated Date: Thu, 15 Jul 2021 (15:23 IST)
ಬಂಗಾರಪೇಟೆ ಪೋಲೀಸರ ಭರ್ಜರಿ ಕಾರ್ಯಚರಣೆ ಕೇರಳಾ ಮೂಲದ ಇಬ್ಬರು ಬೈಕ್ ಕಳ್ಳರನ್ನು ಮಾಲು ಸಮೇತ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ರೆಹಮಾನ್ ಹಾಗೂ ಅಮೀರ್ ಬಂದಿತ ಬೈಕ್ ಕಳ್ಳರಾಗಿದ್ದು, ಆರೋಪಿಗಳಿಂದ 8 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ
, ಇನ್ನು ಬಂಗಾರಪೇಟೆ ಪೋಲೀಸರು ವಾಹನಗಳನ್ನ ತಪಾಸಣೆ ಮಾಡುವ ವೇಳೆ ಪರಾರಿಯಾಗಲು ಯತ್ನಿಸಿದ್ದು ಅನುಮಾನಗೊಂಡು ಚೇಸ್ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ವಿಷಯವನ್ನ ಬಾಯಿಬಿಟ್ಟಿದ್ದಾರೆ.
ಈ ಇಬ್ಬರು ಬೈಕ್ ಕಳ್ಳರು ಬೆಂಗಳೂರಿನ ಶೇಷಾದ್ರಿಪುರಂ, ಕಾಟನ್ ಪೇಟರ ರಾಜಾಜಿನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ನಡೆಸಿದ್ದಾರೆ ಎಂದು ತನಿಖೆವೇಳೆ ಬಾಯಿ ಬಿಟ್ಟಿದ್ದಾರೆ ಇನ್ನು ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಕರ್ ಡಿವೈಎಸ್ ಪಿ ಮುರಳೀದರ್ ರವರ ಮಾರ್ಗದರ್ಶದಲ್ಲಿ ಬಂಗಾರಪೇಟೆ ಸಿಪಿಐ ಬಿ ಸುನೀಲ್ ಕುಮಾರ್, ಎಸ್‌ಐ ಆರ್ ಜಗದೀಶ್ ರೆಡ್ಡಿ ನೇತೃತ್ವದ ತಂಡ ರಚಿಸಿ, ಕಳುವು ಮಾಡ್ತಿದ್ದ ಆರೊಫಿಗಳನ್ನು ಬಂಧಿಸಲು ತನಿಖೆ ನಡೆಸಿದು.
13ರಂದು ಬಂಗಾರಪೇಟೆ ಕೆಎಸ್.ಆರ್ ಟಿಸಿ ಬಸ್ ನಿಲ್ದಣದ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ ವೇಳೆ ಆರೋಪಿಗಳು ಪೋಲೀಸರನ್ನು ನೋಡಿ ಪರರಾಯಗಲು ಯತ್ನಿಸಿದ್ದಾದ್ರು ಅನುಮಾನಗೊಂಡು ಚೇಸ್ ಮಾಡಿ ಹಿಡಿದಾಗ ಬೈಕ್ ಕಳ್ಳತನ ಬಗ್ಗೆ ಬೆಳಕಿಗೆ ಬಂದಿದೆ, ಕಳ್ಳರನ್ನು ಪತ್ತೆ ಹಾಚ್ಚಿ ಮಾಲು ವಶಪಡಿಸಿಕೊಂಡ ತಂಡಕ್ಕೆ ಎಸ್ಪಿ ಇಲಕ್ಕಿಯಾ ಕರುಣಾಕರ್ ಶ್ಲಾಘಿಸಿದ್ದಾರೆ.