ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನು ಸೆಪ್ಟಂಬರ್ 13 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಇಡಿ ಅಧಿಕಾರಿಗಳ ಪರ ಹಾಗೂ ಡಿ.ಕೆ.ಶಿವಕುಮಾರ್ ಪರವಾಗಿ ವಾದ – ವಿವಾದ ಮಂಡಿಸಿದ ನ್ಯಾಯವಾದಿಗಳ ಹೇಳಿಕೆ ಪರಿಗಣಿಸಿ ಆಲಿಸಿದ ಕೋರ್ಟ್ ಕೊನೆಗೆ ಇಡಿ ಕಸ್ಟಡಿಗೆ ಡಿಕೆಶಿ ಯನ್ನು ಒಪ್ಪಿಸುವಂತೆ ಆದೇಶ ಹೊರಡಿಸಿತು.
ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿರೋ ಪ್ರಕರಣವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದಾರೆ. ಡಿ.ಕೆ.ಶಿ ಬಂಧನ ಖಂಡಿಸಿ ರಾಜ್ಯದ ರಾಮನಗರ, ಕನಕಪುರ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ.