ವ್ಯಕ್ತಿಯನ್ನ ಕೊಲೆ ಮಾಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಮೃತದೇಹವನ್ನ ಆರೋಪಿ ತಂದಿದ್ದ.ಮಹೇಶಪ್ಪ ಎಂಬಾತನನ್ನು ಕೊಂದು ತಂದಿದ್ದ ಆರೋಪಿಯಾಗಿದ್ದು,ರಾಜಶೇಖರ್ ಕೊಲೆ ಮಾಡಿ ಮೃತದೇಹದ ಸಹಿತ ಠಾಣೆಗೆ ಬಂದಿರುವ ವ್ಯಕ್ತಿಯಾಗಿದ್ದಾನೆ.
ನಂಜನಗೂಡು ಬಳಿಯ ಹಿಮನಗುಂಡಿ ಎಂಬ ಹಳ್ಳಿಯಿಂದ ಮಹೇಶಪ್ಪನನ್ನು ಬೆಂಗಳೂರಿಗೆ ರಾಜಶೇಖರ ಕರೆತಂದಿದ್ದ.ಈ ಹಿಂದೆ ಮಹೇಶಪ್ಪ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸಿಸುತ್ತಿದ್ದ.ಈ ವೇಳೆ ರಾಜಶೇಖರನ ಜೊತೆ ಮಹೇಶಪ್ಪಗೆ ಒಳ್ಳೆ
ಸ್ನೇಹ ಇತ್ತು.ಬ್ಯಾಂಕ್ ಗಳಲ್ಲಿ ಲೋನ್ ಕೊಡಿಸುವುದಾಗಿ ಹಲವಾರು ಜನರಿಂದ ಹಣ ಪಡೆದಿದ್ದ ಮಹೇಶಪ್ಪ.ಈ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು.ಆದರೆ ಯಾರಿಗೂ ಲೋನ್ ಕೊಡಿಸದೇ ಪಡೆದ ಹಣ ವಾಪಸ್ ನೀಡದೇ ಮಹೇಶಪ್ಪ ಎಸ್ಕೇಪ್ ಆಗಿದ್ದ .ಈ ಹಿನ್ನೆಲೆ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಡಬೇಕಿದ್ದ ಹಣವನ್ನ ರಾಜಶೇಖರ ನೀಡಿದ್ದ .ಹೀಗಾಗಿ ರಾಜಶೇಖರ ಮಹೇಶಪ್ಪನ್ನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ.ಕಾರಿನಲ್ಲಿ ಕರೆತಂದು ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.
ಸುಮಾರು ಒಂದೂವರೆ ಕೋಟಿ ಹಣ ಕೊಡಬೇಕು ಎಂದು ಆರೋಪಿ ರಾಜಶೇಖರ ಹೇಳಿದ್ದು ,ಕಾರಿನಲ್ಲಿ ಹಲ್ಲೆ ಮಾಡಿದ ಬಳಿಕ ಬೆಳಗ್ಗೆ ತನಕ ಗಾಯಾಳುವನ್ನು ಆರೋಪಿ ಕಾರಿನಲ್ಲಿ ಇರಿಸಿಕೊಂಡಿದ್ದ.ಬೆಳಗ್ಗೆ ಎಚ್ಚರವಾಗಿ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಹೀಗಾಗಿ ಬೆಳಗಿನ ಜಾವ ಕಾರು,ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ರಾಜಶೇಖರ ಆಗಮಿಸಿದ್ದಾನೆ.ಸದ್ಯ ಕೇಸ್ ದಾಖಲಿಸಿ ರಾಜಶೇಖರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.