Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಪ್ರವೇಶಿಸಿದ ಭಾರತ್​​​ ಜೋಡೋ ಯಾತ್ರೆ

ಕರ್ನಾಟಕ ಪ್ರವೇಶಿಸಿದ ಭಾರತ್​​​ ಜೋಡೋ ಯಾತ್ರೆ
bangalore , ಶುಕ್ರವಾರ, 30 ಸೆಪ್ಟಂಬರ್ 2022 (20:33 IST)
ಇಂದು ಭಾರತ್​​ ಜೋಡೋ ಕರ್ನಾಟಕವನ್ನು ಪ್ರವೇಶಿಸಿದೆ. ಕರುನಾಡಲ್ಲಿ ರಾಹುಲ್​ ಗಾಂಧಿ ಭಾರತ್​ ಜೋಡೋ ಆರಂಭವಾಗಿದ್ದು, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರತ್​​ ಜೋಡೋ ಆರಂಭವಾಯ್ತು. ರಾಹುಲ್​ ಗಾಂಧಿ ಪಾದಯಾತ್ರೆಗೆ ಸಾವಿರಾರು ಮಂದಿ ಸಾಥ್​​​ಕೊಡ್ತಿದ್ದಾರೆ. ರಾಹುಲ್​ ಗಾಂಧಿ ಜೊತೆ ಡಿಕೆಶಿ, ಸಿದ್ದರಾಮಯ್ಯ ಯಾತ್ರೆಯಲ್ಲಿ ತೆರಳಿದ್ದು,  ರಾಗಾ ಯಾತ್ರೆಯಲ್ಲಿ ಡಿಕೆಶಿ-ಸಿದ್ದು ಒಗ್ಗಟ್ಟಿನ ಜಪ ಮಾಡಿದ್ರು. ಗುಂಡ್ಲುಪೇಟೆಯಲ್ಲಿ ನಡೆದ ಪಾದಯಾತ್ರೆ ಉದ್ಘಾಟನೆ ಸಮಾವೇಶದಲ್ಲಿ ಮಾತನಾಡಿದ ಅವರು AICC ಮಾಜಿ ಅಧ್ಯಕ್ಷ ರಾಹುಲ್ ‌ಗಾಂಧಿ ಯಾವ ಶಕ್ತಿ ನಮ್ಮ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ ಎಂದ್ರು. ದೇಶದಲ್ಲಿ ‌ಬಿಜೆಪಿ‌, RSS ದ್ವೇಷ ಹರಡುವುದರ ವಿರುದ್ಧ ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಸಂವಿಧಾನ ಇಲ್ಲ‌ ಅಂದರೆ ರಾಷ್ಟ್ರ ಧ್ವಜಕ್ಕೆ ಬೆಲೆ ಇಲ್ಲ ಎಂದ ಅವರು, ಮಳೆ, ಬಿಸಿಲು ಇದ್ದರೂ ನಿರಂತರ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದ್ರು. ಈ‌ ಯಾತ್ರೆಯಲ್ಲಿ ಎಲ್ಲಾ ಧರ್ಮ, ಭಾಷೆಯವರು ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಜಾತಿ, ಧರ್ಮ ಪ್ರಶ್ನೆ ಮಾಡದೆ ಸಹಾಯ ಮಾಡಲು ಮುಂದಾಗುತ್ತಾರೆ. ಇದೇ ನಮ್ಮ ಸುಂದರವಾದ, ಶಾಂತಿಯ, ಸೌಹಾರ್ದತೆಯ ಭಾರತ ಎಂದರು.  ಭಾರತ್​​​ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಯಾವುದೇ ಶಕ್ತಿ ಪಾದಯಾತ್ರೆಯನ್ನು‌ ನಿಲ್ಲಿಸಲು ಸಾಧ್ಯವಿಲ್ಲ. ಇದು ಭಾರತದ ಯಾತ್ರೆ ಎಂದರು. ದಾರಿಯುದ್ದಕ್ಕೂ ಜನರು ಭೇಟಿ ಮಾಡಿ ನೋವು, ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಜನರು ತಮ್ಮ ನೋವು, ದುಃಖಗಳನ್ನು ಹೇಳುತ್ತಿದ್ದಾರೆ ಎಂದು ವಿವರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ