ಕೋಲಾರ:ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ್ ಬಂದ್ ಗೆ ಕೋಲಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ವಕಿಲರೊಬ್ಬರ ಮಗನ ಮದುವೆಗೆ ಜನರೇ ಬಾರದ ಹಿನ್ನಲೆಯಲ್ಲಿ ಮದುವೆಗೆಂದು ತಯಾರಿಸಿದ ಊಟವೆಲ್ಲ ಉಳಿದುಹೋಗಿದೆ.
ಇಲ್ಲಿನ ನಾರಾಯಣಿ ಕಲ್ಯಾಣ ಮಂಟಪದಲ್ಲಿ ವಕೀಲ ಕೋದಂಡಪ್ಪ ಅವರ ಮಗ ವಿರೇಂದ್ರ ಹಾಗೂ ಚಿತ್ರಾ ಅವರ ವಿವಾಹ ನಿಗದಿಯಾಗಿತ್ತು. ಆದರೆ ಬಂದ್ ನಿಂದಾಗಿ ಮದುವೆಗೆ ಜನರೇ ಇಲ್ಲದಂತಾಗಿದ್ದು, ತಯಾರಿಸಿದ ಊಟವೆಲ್ಲ ಹಾಗೇ ಉಳಿದುಬಿಟ್ಟಿದೆ.
ಕಳಸಾಬಂಡೂರಿ, ಮಹದಾಯಿ ಯೋಜನೆ, ರೈತರ ಸಾಲ ಮನ್ನಾಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕೋಲಾರದಾದ್ಯಂತ್ ಭಾರೀ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನಾಕಾರರು ಬೀದಿಗಿಳಿದು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ನಡುವೆ ಮದುವೆ ಮನೆಗೆ ಜನ ಬಾರದೇ ಊಟ್ ಉಳಿದು ಹೋಗಿದ್ದರಿಂದ ಮದುವೆ ಮನೆಗೆ ಬಂದ ಪ್ರತಿಭಟನಾಕಾರರು ಭರ್ಜರಿ ಮದುವೆ ಊಟ ಸವಿದು ತೆರಳಿದ್ದಾರೆ. ಹೀಗಾಗಿ ಪ್ರತಿಭಟನೆ ಜತೆ ಭರ್ಜರಿ ಊಟವೂ ಪ್ರತಿಭಟನಾ ನಿರತರಿಗೆ ಸಿಕ್ಕಿದಂತಾಗಿದೆ.