ಮಾಜಿ ಸಚಿವ ಈಶ್ವರಪ್ಪ, ಮಾಜಿ ಸಚಿವ ರಮೇಶ್ ಜಾರಹೊಳಿ ಪರ ಸಚಿವ ಭೈರತಿ ಬಸವರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಅವರುಗಳಿಗೆ ಸಚಿವ ಸ್ಥಾನ ನೀಡುವಂತೆ ಖಂಡಿತ ಒತ್ತಾಯ ಮಾಡುತ್ತೇನೆ. ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು, ನನ್ನ ಜೊತೆಗೆ ಬಂದವರೊಂದಿಗೆ ಸೇರಿ ಒತ್ತಾಯ ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿದ್ರು. ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕಳಂಕ ರಹಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದ್ರು. RSS ಬ್ಯಾನ್ ಮಾಡಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, RSS ಏನು ದೇಶ-ದ್ರೋಹದ ಕೆಲಸ ಮಾಡಿದೆ. RSS ದೇಶಭಕ್ತ ಸಂಸ್ಥೆ. ದೇಶದ ಬಗ್ಗೆ ಅಪಾರ ಕಾಳಜಿ ವಹಿಸುವುದನ್ನ ಸಿದ್ದರಾಮಯ್ಯಗೆ ಸಹಿಸಲು ಆಗುತ್ತಿಲ್ಲ. ಇಲ್ಲಿ ಅನ್ನ ತಿಂದು ದ್ರೋಹ ಬಗೆಯುವ ಕೆಲಸ PFI ಮಾಡಿದೆ ಎಂದ್ರು. ಭಾರತ್ ಜೋಡೊ ಯಾತ್ರೆ ಕುರಿತು ಮಾತನಾಡಿದ ಅವರು, ಪಾದಯಾತ್ರೆಗೆ ಹೆದರುವ ಪರಿಸ್ಥಿತಿ BJPಗೆ ಇಲ್ಲ. ಇಂತಹ ನೂರು ನಾಯಕರು ಬಂದರೂ, BJPಯನ್ನು ಏನೂ ಮಾಡಲು ಸಾಧ್ಯ ಇಲ್ಲ ಎಂದು ತಿಳಿಸಿದ್ರು.