ಈ ಹಿಂದೆ ಗುಂಡೇಟಿನಿಂದ ಗಾಯಗೊಂಡು ಬದುಕುಳಿದಿರೋ ಭೀಮಾ ತೀರದ ಹಂತಕನ ಸಹವರ್ತಿ ಭಾಗಪ್ಪ ಹರಿಜನ ಮತ್ತೆ ಸುದ್ದಿಯಲ್ಲಿದ್ದಾನೆ.
ನಾನು ನನ್ನಷ್ಟಕ್ಕೆ ಇದ್ದೇನೆ. ಯಾರ ತಂಟೆಗೂ ಹೋಗುತ್ತಿಲ್ಲ. ಯಾರ ಸಹವಾಸವನ್ನೂ ಮಾಡುತ್ತಿಲ್ಲ. ನನ್ನ ಪಾಡಿಗೆ ನಾನಿದ್ದೇನೆ. ಆದರೆ ವಿನಾಕಾರಣ ನನಗೆ ವಿರುದ್ಧವಾದರೆ ನಾನು ಅವರ ತಲೆಗೆ ಬಂದೂಕು ಇಟ್ಟು ಹೊಡೆದುರುಳಿಸುತ್ತೇನೆ ಅಂತ ಖಡಕ್ ಎಚ್ಚರಿಕೆ ನೀಡಿದ್ದಾನೆ ಅನ್ನೋ ಮಾತುಗಳು ಹರಿದಾಡುತ್ತಿವೆ.
ಭೀಮಾತೀರದ ಹಂತಕ ಚಂದಪ್ಪ ಹರಿಜನನ ಭಂಟನಾಗಿರೋ ಭಾಗಪ್ಪ ಹರಿಜನ ತನಗೆ ಚಂದಪ್ಪನ ಕಡೆಯವರು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾನೆ.
ನಾನು ಸಮಾಜಮುಖಿಯಾಗುತ್ತಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬಾರದು. ನನ್ನ ವಿಷಯಕ್ಕೆ ಬಂದಲ್ಲಿ 24 ತಾಸಿನಲ್ಲೇ ಬಂದೂಕು ಹಿಡಿಯುವೆ ಅಂತ ವಿರೋಧಿಗಳಿಗೆ ಟಾಂಗ್ ನೀಡಿದ್ದಾನೆ.
ಸಮಾಜಕ್ಕೆ ಹಾನಿಯಾಗಬಾರದು ಅಂತ ಸುಮ್ಮನಾಗಿರುವೆ ಅಂತ ಭಾಗಪ್ಪ ಹರಿಜನ ಹೇಳಿದ್ದಾನೆನ್ನಲಾಗಿದೆ.