Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯಾದಗಿರಿ ಜಿಲ್ಲೆಗೆ ಜನಾರ್ಶೀವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾಗೆ ನಾಡಬಂದೂಕು ಸಿಡಿಸಿ ಭ
ರ್ಜರಿ ಸ್ವಾಗತ ಮಾಡಲಾಯಿತು.
ಯಾದಗಿರಿ ತಾಲೂಕಿನ ಯರಗೋಳ ಗ್ರಾಮಕ್ಕೆ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಕೇಂದ್ರ ಸಚಿವ ಭಗವಂತ ಖೂಬಾಗೆ ಯರಗೋಳ ಗ್ರಾಮದಲ್ಲಿ ಪೊಲೀಸರ ಮುಂದೆಯೇ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸ್ವಾಗತಿಸಿ ಕಾರ್ಯಕರ್ತರು ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಯಾದಗಿರಿ ಎಸ್ಪಿ ವೇದಮೂರ್ತಿ ಗಾಳಿಯಲ್ಲಿ ಗುಂಡು ಹಾರಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಪಿಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಕೇಂದ್ರ ಸಚಿವ ಖೂಬಾ ಆಗಮನದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಜನ ಜಾತ್ರೆ ಎಂಬಂತೆ ಜೆಸಿಬಿಗಳ ಮೂಲಕ ಪುಷ್ಪ ಅರ್ಪಿಸಿ ಭವ್ಯ ಸ್ವಾಗತ ಮಾಡಿಕೊಂಡರು. ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಸುರಪುರ ಶಾಸಕರಾದ ರಾಜುಗೌಡ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಹಾಗೂ ಬಿಜೆಪಿ ಮುಖಂಡರು ಭರ್ಜರಿ ಸ್ವಾಗತ ಮಾಡಿಕೊಂಡರು..