ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಲು ಸುಲಭವಾಗುವಂತೆ 'ಇವಿ ಮಿತ್ರ' ಎನ್ನುವ ಅಪ್ಲಿಕೇಷನ್ ಒಂದನ್ನು ಬೆಸ್ಕಾಂ ಬಿಡುಗಡೆ ಮಾಡಿದೆ.
ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್‌ಗಾಗಿ ನಗರದಲ್ಲಿ 74 ಸ್ಥಳಗಳಲ್ಲಿ 136 ಪೋರ್ಟ್ಸ್‌ಗಳನ್ನು ಹೊಂದಿದೆ.ಸ್ಟೇಷನ್‌ಗಳು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ ತೆರೆದಿರುತ್ತವೆ, ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರಿಗೆ ಈ ಮಾಹಿತಿ ಲಭ್ಯವಿಲ್ಲ. ಈ ಅಪ್ಲಿಕೇಷನ್ ಮೂಲಕ ವಾಹನಗಳ ಚಾರ್ಜಿಂಗ್ ಕುರಿತು ಅರಿವು ಮೂಡಿಸಲು ನೆರವಾಗುತ್ತದೆ. ಸ್ಟೇಷನ್‌ಗಳಲ್ಲಿ AC001 ಹಾಗೂ DC001 ಚಾರ್ಜರ್ ಮಾಡೆಲ್‌ಗಳು ಲಭ್ಯವಿದೆ.
ಇವಿ ಮಿತ್ರ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್‌ಗಳಲ್ಲಿ ಲಭ್ಯವಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಗರದಲ್ಲಿ 300 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುತ್ತದೆ.