3.50 ರ ಸುಮಾರಿಗೆ ಓಫಾರಂ ಮುಂಭಾಗದ ಅಪಾರ್ಟ್ಮೆಂಟ್ ಬಳಿಯ ಟ್ರಾನ್ಸ್ ಫಾರಂ ಸಮಸ್ಯೆಯಾಗಿದೆ.ದುರಂತವನ್ನ ವೈಟ್ ಟ್ಯಾಪಿಂಗ್ ಮೇಲೆ ಬೆಸ್ಕಾಂ ಹಾಕಿದೆ.ವೈಟ್ ಟ್ಯಾಪಿಂಗ್ ನಿಂದ ಸರಿಯಾಗಿ ಗ್ರೌಂಡ್ ಆಗಿಲ್ಲ.ನಮ್ಮ ಗಮನಕ್ಕೆ ಬಂದ ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗುವ ಮೊದಲೇ ದುರಂತವಾಗಿದೆ.3.50 ಡ್ರಿಪ್ ಆಗಿ ಕೇಬಲ್ ಕಟ್ಟಾಗಿದೆ.
ದುರಂತ ನಡೆದ 150 ಮೀಟರ್ ಬಿಟ್ಟು ಉಳಿದ ಕಡೆ ಅಂಡರ್ ಗ್ರೌಂಡ್ ಕೇಬಲ್ ಕೆಲಸವಾಗಿದೆ.ಬಿಬಿಎಂಪಿ ಅಂಡರ್ ಪಾಸ್ ಕಾಮಗಾರಿ ಇದ್ದಿದ್ರಿಂದ 150 ಮೀಟರ್ ಪೆಂಡಿಂಗ್ ಇತ್ತು.ಅದೇ ಸ್ಥಳದಲ್ಲಿ ಈ ದುರಂತವಾಗಿದೆ.ಡ್ರಿಪ್ ಆಗದೇ ಇರೋದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಬೆಸ್ಕಾಂನ ಗುಣಮಟ್ಟ, ಪ್ರಾಮಾಣಿತ,ಸುರಕ್ಷಣೆ ಪ್ರಧಾನ ವ್ಯವಸ್ಥಾಪಕರು ಎಸ್ ಟಿ ಶಾಂತಮಲ್ಲಪ್ಪ ಹೇಳಿದ್ದಾರೆ.