ಬೆಂಗಳೂರು : ಬೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆಯನ್ನ ಶುರು ಮಾಡಿದಾಗ ಇದರ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಆದರೆ ಯಾವಾಗ ಡಿಜಿಟಲ್ ಮೀಟರ್ ಹಾಕಿದ ನಂತರದ ತಿಂಗಳ ಕರೆಂಟ್ ಬಿಲ್ ಹಲವರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಬೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು ಅತ್ಯಂತ ವೇಗವಾಗಿ ಮಾಡ್ತಿದೆ.
ಈಗಾಗಲೇ ಸುಮಾರು 3 ಲಕ್ಷ ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನ ಬೆಸ್ಕಾಂ ಮಾಡಿದೆ. ಈ ಡಿಜಿಟಲ್ ಮೀಟರ್ ಜನಸ್ನೇಹಿ ಅಂತ ಫ್ರೀಯಾಗಿ ಮೀಟರ್ ಅಳವಡಿಕೆ ಮಾಡಲಾಗ್ತಿದೆ.
ಆದರೆ ಈಗ ಡಿಜಿಟಲ್ ಮೀಟರ್ ಅಳವಡಿಕೆಯ ನಂತರ ಮೊದಲ ಬಿಲ್ ನೋಡಿ ಬೆಂಗಳೂರಿಗರು ಶಾಕ್ ಆಗಿದ್ದಾರೆ. ಬರುತ್ತಿದ್ದ ಬಿಲ್ಗಿಂತ ಏಕ್ ಧಮ್ ಎರಡು ಪಟ್ಟು ಹೆಚ್ಚಾಗಿದ್ದು ಅವರಿಗೆ ತಲೆ ನೋವಾಗಿದೆ.
ಬೆಸ್ಕಾಂನ ನೂತನ ಪ್ರಯೋಗದ ವಿರುದ್ಧ ಈಗ ವಿರೋಧ ಕೇಳಿ ಬರುತ್ತಿದ್ದು, ಹಳೆ ಮೀಟರ್ ತೆಗೆದು ಹೊಸ ಡಿಜಿಟಲ್ ಮೀಟರ್ ಅಳವಡಿಸಿ ವಂಚಿಸುತ್ತಿದೆಯಾ ಬೆಸ್ಕಾಂ ಎಂಬ ಅನುಮಾನದಲ್ಲೇ ಬೆಂಗಳೂರಿಗರು ದೂರು ಕೊಡಲು ಮುಂದಾಗಿದ್ದಾರೆ.