ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ ಆಕೆಯಿಂದ ₹36 ಲಕ್ಷ ಪಡೆದು ವಂಚನೆ ಮಾಡಿದ ಘಟನೆ ಬಗ್ಗೆ ಎಫ್‌ಐಆರ್ ದಾಖಲಾಗಿದೆ.
10 ವರ್ಷಗಳಿಂದ ಪರಿಚಯವಾಗಿದ್ದ ಮೋಗಹನ್ ಎಂಬವರನ್ನು ಸಂತ್ರಸ್ತೆ 2022ರಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಗೆ 2023ರ ಫೆಬ್ರುವರಿಯಲ್ಲಿ ಮಗು ಜನಿಸಿತ್ತು. ಕಳೆದ ವರ್ಷ ಆತ ಮನೆ ಬಿಟ್ಟು ಹೋಗಿದ್ದಾನೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಸಂತ್ರಸ್ತೆಗೆ ಹೊಸ ಮನೆ ಕಟ್ಟೋಣ ಎಂದು ಭರವಸೆ ನೀಡಿ, ಚಿನ್ನಾಭರಣವನ್ನು ₹36 ಲಕ್ಷ ಸಾಲ ಪಡೆದು ಆತನಿಗೆ ನೀಡಿದ್ದೆ. ಆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನ್ಯಾಯ ಕೇಳಲು ಹೋದರೆ ನನ್ನ ಮೇಲೆ ಹಲ್ಲೆ ನಡೆಸಿದ್ದ. ನಾಲ್ಕು ಬಾರಿ ಪೊಲೀಸ್ ಠಾಣೆಗೆ ಹೋಗಿದ್ದರೂ ನ್ಯಾಯ ದೊರೆಯುತ್ತಿಲ್ಲ. ಮತ್ತೆ ದೂರು ನೀಡಿದರೆ ನನ್ನ ಮೇಲೆಯೇ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದರು ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
2021ರಲ್ಲಿ ಮೊದಲ ಪತಿಯಿಂದ ಸಂತ್ರಸ್ತೆ ವಿಚ್ಛೇದನ ಪಡೆದುಕೊಂಡಿದ್ದರು.