Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Sampriya
ಶನಿವಾರ, 7 ಜೂನ್ 2025 (19:29 IST)
Photo Courtesy X
ಬೆಂಗಳೂರು: ಮೇ 21 ರಂದು ಹದಿಹರೆಯದ ಹುಡುಗಿಯ ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ಶವವನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ . ಬೆಂಗಳೂರು ಗ್ರಾಮಾಂತರ ವಿಭಾಗದ ಸೂರ್ಯನಗರ ಪೊಲೀಸರು ಏಳು ಆರೋಪಿಗಳನ್ನು ಬಿಹಾರದಲ್ಲಿ ಪತ್ತೆ ಹಚ್ಚಿ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಆರೋಪಿಗಳು ಬಿಹಾರದ ನವಾಡ ಜಿಲ್ಲೆಯವರು.

ಏಳು ಆರೋಪಿಗಳಲ್ಲಿ ಮೂವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.


ಅಪರಾಧದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಆರೋಪಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 21 ರಂದು ಬೆಂಗಳೂರಿನ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಹರಿದ, ನೀಲಿ ಬಣ್ಣದ ಸೂಟ್‌ಕೇಸ್ ಪತ್ತೆಯಾಗಿತ್ತು. ಅದರೊಳಗೆ 17ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. 

ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯನ್ನು ಬೇರೆಡೆ ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಶವವನ್ನು ಚಲಿಸುವ ರೈಲಿನಿಂದ ಹೊರಗೆ ಎಸೆಯಲಾಗಿದೆ ಎಂದು ತಿಳಿದುಬಂದಿತ್ತು. ಆದರೆ, ಬಾಲಕಿಯನ್ನು ಬೇರೆ ಸ್ಥಳದಲ್ಲಿ ಕೊಲ್ಲಲಾಗಿದ್ದರೂ, ಆರೋಪಿಗಳು ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಕ್ಯಾಬ್‌ನಲ್ಲಿ ರೈಲ್ವೆ ಹಳಿಗಳ ಬಳಿ ಸಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೇ ಸಂತ್ರಸ್ತೆಯ ನಾಪತ್ತೆ ಬಗ್ಗೆ ಕರ್ನಾಟಕದಾದ್ಯಂತ ಹಲವು ನೋಟಿಸ್‌ಗಳನ್ನು ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಕ್ಸ್ ಕೊಳೆಯಾಗಿದ್ದರೆ ಮತ್ತೆ ಮೊದಲಿನಂತಾಗಲು ಇಲ್ಲಿದೆ ಟಿಪ್ಸ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಲ್ಲಿ ಇನ್ನು ಸಿಂಗಲ್ ಆಗಿ ಕಾರಿನಲ್ಲಿ ಓಡಾಡಿದ್ರೂ ಟ್ಯಾಕ್ಸ್: ಇದೊಂದು ಬಾಕಿ ಇತ್ತು ಎಂದ ಪಬ್ಲಿಕ್

ರಾಹುಲ್ ಗಾಂಧಿಗೆ ಬೆದರಿಕೆಗೆ ಸಿದ್ದರಾಮಯ್ಯ ಗರಂ: ಆರ್ ಎಸ್ಎಸ್ ದುರುಳರು ಎಂದ ಸಿಎಂ

ಮುಂದಿನ ಸುದ್ದಿ
Show comments