Publish Date: Mon, 23 Feb 2026 (16:24 IST)
Updated Date: Mon, 23 Feb 2026 (16:30 IST)
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಯುವತಿ ತನ್ನ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪವನ್ನು ಮಾಡಿದ್ದಾರೆ.
ಈ ಹಿಂದೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಫೆ.21ರಂದು ಇದೇ ಯುವತಿ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಯುವತಿ ತನ್ನದೇ ಸ್ನೇಹಿತರ ವಿರುದ್ಧ ಗ್ಯಾಂಗ್ ರೇಪ್ ದೂರು ದಾಖಲಿಸಿದ್ದಾಳೆ.
ಬೆಂಗಳೂರಿನ ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತೆಗೆ ಗುಲಾಬಿ ಬಣ್ಣದ ಟ್ಯಾಬ್ಲೆಟ್ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಪಾರ್ಟಿಯೊಂದಕ್ಕೆ ಕರೆದೊಯ್ದ ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರನ್ನು ನೀಡಲಾಗಿದೆ. ಈ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್ಐಆರ್ ದಾಖಲಾಗಿದೆ.