Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೆರೆ ಸಂತ್ರಸ್ತರಿಗೆ ಬಿಇಎಲ್ ಉ.ಕ ಬಳಗದಿಂದ ವಿಭಿನ್ನ ರೀತಿಯ ನೆರವು

ನೆರೆ ಸಂತ್ರಸ್ತರಿಗೆ ಬಿಇಎಲ್ ಉ.ಕ ಬಳಗದಿಂದ ವಿಭಿನ್ನ ರೀತಿಯ ನೆರವು
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (14:19 IST)
ಉತ್ತರ ಕರ್ನಾಟಕದಲ್ಲಿ ತಲೆದೂರಿರುವ ಭೀಕರ ಜಲಪ್ರಳಯ ಹಾಗೂ ನಿರಂತರ ಮಳೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ಜನತೆಗೆ ಬಿಇಎಲ್ ಉತ್ತರ ಕರ್ನಾಟಕ ಬಳಗ ವಿಭಿನ್ನ ರೀತಿಯಲ್ಲಿ ನೆರವು ನೀಡಲು ಮುಂದಾಗಿದೆ.
ಸುಮಾರು 750 ಬಾಕ್ಸ್‌ಗಳಲ್ಲಿ ದಿನಬಳಕೆಯ ಪದಾರ್ಥ ಸೇರಿದಂತೆ ಒಟ್ಟು 20 ಬಗೆಯ ಆಹಾರ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ ಮನೆ ಕಳೆದು ಕೊಂಡವರಿಗೆ ಹಣ ನೀಡುವುದರ ಬದಲಾಗಿ ಮನೆ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಇಟ್ಟಿಗೆ ಸಿಮೆಂಟ್, ಕಬ್ಬಿಣ ಇತ್ಯಾದಿ ವಸ್ತುಗಳನ್ನು ನೇರವಾಗಿ ಸಂತ್ರಸ್ತರಿಗೆ ಖರೀದಿಸಿ ಕೊಡುವ ಕಾರ್ಯಕ್ಕೆ ಮುಂದಾಗಿದೆ.
webdunia
ನೆರೆ ಪೀಡಿತ ಪ್ರದೇಶಗಳಾದ ಬಾಗಲಕೋಟ ಜಿಲ್ಲೆಯ ಮುತ್ತೂರು, ಕಂಕಣವಾಡಿ, ಕಳಕೋಡ, ತಮದಡ್ಡಿ, ಹಿಪ್ಪರಗಿ, ಹಳಿಂಗಳಿ ಜಂಬಗಿ, ರೂಗಿ, ಒಂಟಗೋಡಿ ಹಾಗೂ ಅಥಣಿ ತಾಲೂಕಿನ ಸೇಗುಣಸಿ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರಿಗೆ “ನೇರ ನೆರವು” ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಸಹಾಯ ಹಸ್ತವನ್ನು ಜಾಲಹಳ್ಳಿಯ ಬಿಇಎಲ್‌ನ ಉತ್ತರ ಕರ್ನಾಟಕ ಬಳಗ ಕೈಗೊಂಡಿದೆ.
webdunia
 ಬಾಕ್ಸ್ ಐಟಂ :
webdunia
ಸರಿಸುಮಾರು ಒಂದು ತಿಂಗಳಿಗಾಗುವಷ್ಟು  (ಅಕ್ಕಿ, ಗೋದಿ ಹಿಟ್ಟು, ಸಕ್ಕರೆ, ಎಣ್ಣೆ, ಬೆಳೆ, ರವೆ, ಅವಲಕ್ಕಿ, ಚಹಾಪುಡಿ, ಉಪ್ಪು, ಬಿಸ್ಕತ್, ಬ್ಮಾಂಕೆಟ್, ಸಾಬೂನು, ಟೂತ್ ಪೇಸ್ಟ್ ಹಾಗೂ ಬ್ರಷ್, ಮೇಣದ ಬತ್ತಿ, ಬೆಂಕಿ ಕೊಟ್ಟಣ, ಟಾರ್ಚ್, ಬ್ಯಾಟರಿ, ಸ್ಯಾನಿಟರಿ ಪ್ಯಾಡ್, ತಟ್ಟೆ ಮತ್ತು ಬುಟ್ಟಿ) ಪ್ರತಿ ಕುಟುಂಬಕ್ಕೆ 2೦ ಆಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರೇ ಎಚ್ಚರ! ಸೆಪ್ಟೆಂಬರ್ 1ರಿಂದ ರೂಲ್ಸ್ ಬ್ರೇಕ್ ಮಾಡಿದರೆ ಭಾರೀ ದಂಡ