ಕನ್ನಡ ಸದಸ್ಯರ ಜಗಳದ ಲಾಭ ಪಡೆದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಜೋತಾ ಬಾಂದೇಕರ್ ಮೇಯರ್ ಆಗಿ,ಉಪ ಮೇಯರ್ ಆಗಿ ನಾಗೇಶ ಮಂಡೋಳ್ಕರ್ ಆಯ್ಕೆಯಾಗಿದ್ದಾರೆ.
ಎಂಇಎಸ್ ಭಿನ್ನಮತದ ಲಾಭ ಪಡೆಯುವಲ್ಲಿ ಕೂಡಾ ವಿಫಲವಾದ ಕನ್ನಡ ಪರ ಸದಸ್ಯರು, ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿತ್ತು. ಆದರೆ, ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರಿಂದ ಸೋಲನುಭವಿಸಬೇಕಾಯಿತು.
ಮತದಾನದ ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮಲ್ಲಿ ಬಹುಮತವಿಲ್ಲವಾದ್ದರಿಂದ ಮೇಯರ್ ಸ್ಥಾನ ಪಡೆಯುವ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಮೇಯರ್ ಸ್ಥಾನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಬಣದಿಂದ ಜಯಶ್ರೀ ಪುಷ್ಪಾ ಹಾಗೂ ಶಾಸಕ ಫಿರೋಜ್ ಸೇಠ್ ಬಣದಿಂದ ಪುಷ್ಪಾ ಪರ್ವತಾರಾವ್ ಸ್ಪರ್ಧಿಸಿದ್ದರು.
ಕನ್ನಡಿಗರಲ್ಲಿ ಭಿನ್ನಮತದಿಂದಾಗಿ ಎಂಇಎಸ್‌ನ ಸಂಜೋತಾ ಬಾಂದೇಕರ್ 32 ಮತ ಪಡೆದು ಮೇಯರ್ ಸ್ಥಾನ ಅಲಂಕರಿಸಿದ್ದರೆ, ಕನ್ನಡ ಪರ ಅಭ್ಯರ್ಥಿಯಾದ ಜಯಶ್ರೀ ಮಾಳಗಿ 17 ಮತ ಪಡೆದಿದ್ದು, ಪುಷ್ಪಾ 10 ಮತ ಗಳಿಸಿ ಸೋಲನುಭವಿಸಿದರು.
ಕನ್ನಡ ಪರ ಸದಸ್ಯರ ರಾಜಕೀಯ ತಿಕ್ಕಾಟದಿಂದ ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು ಪಾಲಿಕೆಯ ಮುಂದೆ ತೀವ್ರ ಪ್ರತಿಭಟನೆ ನಡೆಸಿದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.