Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚುನಾವಣೆ ಹತ್ತಿರ ಬರ್ತಿದೆ, ಹೊಟ್ಟೆ ಉರಿಸುವುದು ಸರಿಯಲ್ಲ: ರಮೇಶ್ ಕುಮಾರ್

ಚುನಾವಣೆ ಹತ್ತಿರ ಬರ್ತಿದೆ, ಹೊಟ್ಟೆ ಉರಿಸುವುದು ಸರಿಯಲ್ಲ: ರಮೇಶ್ ಕುಮಾರ್
ಬೆಂಗಳೂರು , ಬುಧವಾರ, 1 ಮಾರ್ಚ್ 2017 (18:07 IST)
ಚುನಾವಣೆ ಹತ್ತಿರ ಬರ್ತಿದೆ, ಅಭ್ಯರ್ಥಿಗಳ ನೊಂದ ಕುಟುಂಬದವರ ಹೊಟ್ಟೆ ಉರಿಸುವುದು ಸರಿಯಲ್ಲ. 362 ಮಂದಿ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಗೆ ಸಮ್ಮತಿ ಸೂಚಿಸೋಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಸಚಿವರಿಗೆ ಮನವಿ ಮಾಡಿದರು.
 
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಇದರಲ್ಲಿ ಮೈಲೇಜ್ ಪ್ರಶ್ನೆಯೇ ಇಲ್ಲ ನೇಮಕಾತಿ ಆಗಲಿ. ಇದರಲ್ಲಿ ಯಾರೊಬ್ಬರ ಸೋಲು ಗೆಲುವು ಇಲ್ಲ ಎಂದರು.
 
ಸಂಪುಟ ಸಭೆಯಲ್ಲಿ ನೇಮಕಾತಿ ಸಂಬಂಧ ಒಪ್ಪಿಗೆ ನೀಡುವ ಕುರಿತಂತೆ ಪರಸ್ಪರ ವಾಗ್ವಾದ ಕೋಲಾಹ ಸೃಷ್ಟಿಸಿತು. ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರ ಅಭಿಪ್ರಾಯ ಪಡೆಯಲಾಯಿತು. ಸಚಿವ ರಮೇಶ್ ಕುಮಾರ್ ಮಾತಿಗೆ ಮನ್ನಣೆ ನೀಡಿದ ಸಚಿವರು ಕೊನೆಗೂ ಸರ್ವಸಮ್ಮತಿಯ ಮೇರೆಗೆ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಕ್ಕೆ ಸಮ್ಮತಿ ಸೂಚಿಸಿದರು.
 
ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ಸಮರ ಅಂತ್ಯಗೊಂಡಂತಾಗಿದೆ. ಸರಕಾರದ ನಿರ್ಧಾರಕ್ಕೆ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಎಫ್‌ಐಆರ್