Publish Date: Sun, 19 Apr 2020 (17:33 IST)
Updated Date: Sun, 19 Apr 2020 (17:43 IST)
ಲಾಕ್ ಡೌನ್ ವೇಳೆ ರ್ಯಾಷ್ ಡ್ರೈವಿಂಗ್ ಮಾಡುತ್ತಿದ್ದ ಕಾರನ್ನು ತಡೆದ ಮಹಿಳಾ ಪೊಲೀಸ್ ಮೇಲೆ ಹಲ್ಲೆ ನಡೆದಿದೆ.
ಮಹಾರಾಷ್ಟ್ರದ ಥಾಣೆ ನಗರದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕ ಜೋರಾಗಿ ಚಲಾಯಿಸುತ್ತಿದ್ದನು. ಈ ವೇಳೆ ಮಹಿಳಾ ಪೇದೆ ಕಾರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರು ಚಾಲಕನು ಮಹಿಳಾ ಪೇದೆ ವಿರುದ್ಧ ಜಗಳಕ್ಕೆ ಮುಂದಾಗಿದ್ದಾನೆ. ಅಲ್ಲದೇ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.
ಕಾರು ಚಲಾಯಿಸುತ್ತಿದ್ದವನ ವಿರುದ್ಧ ಸೆಕ್ಷನ್ 353 ಐಪಿಸಿ ಅನ್ವಯ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಕೇಸ್ ಹಾಕಲಾಗಿದೆ.