Select Your Language

Notifications

webdunia
webdunia
webdunia
webdunia

ಕುಡಿದು ರಸ್ತೆಗಿಳಿಯೋ ಮುನ್ನ ಎಚ್ಚರ!

Be careful before you hit the road drunk
ಡ್ರಂಕ್ ಅಂಡ್ ಡ್ರೈವ್ ವಿರುದ್ಧದ ಕ್ರಮವನ್ನ ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದು, ಕುಡಿದು ವಾಹನ ಚಲಾಯಿಸುವ ಸವಾರರ ವಾಹನವನ್ನ ಮುಟ್ಟುಗೋಲು ಹಾಕಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ.ಬಿ.ಆರ್.ರವಿಕಾಂತೇಗೌಡ ಈ ಬಗ್ಗೆ ಎಚ್ಚರಿಕೆ ನೀಡಿದ್ದು, 'ಡ್ರಂಕ್ ಅಂಡ್ ಡ್ರೈವ್ ಒಂದು ಅಪಾಯಕಾರಿ ಸಂಚಾರ ಉಲ್ಲಂಘನೆ.
ಈ ಸಂಚಾರ ಉಲ್ಲಂಘನೆಯನ್ನ ಪೊಲೀಸರು ರಾಜಿ ಮಾಡಿಕೊಳ್ಳುವುದಿಲ್ಲ. ನಿಯಮ ಉಲ್ಲಂಘಿಸುವವರು ವಾಹನ ವಾಪಾಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೊಲೀಸರು ವಾಹನವನ್ನ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಮತ್ತು ಸ್ವೀಕೃತಿಯನ್ನ ನೀಡುತ್ತಾರೆ. ಇನ್ನು ದಂಡವನ್ನ ನ್ಯಾಯಾಲಯದಲ್ಲಿ ಮಾತ್ರ ಪಾವತಿಸಬೇಕು' ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾದಲ್ಲಿ ಅನಿವಾಸಿ ಭಾರತೀಯರ ಭೇಟಿ