Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದೇಶದಾದ್ಯಂತ ಕೊರೊನಾ (Corona) 4ನೇ ಅಲೆ ಭಯ ಆವರಿಸಿದ್ದು, ಕೊರೊನಾ ಹರಡದಂತೆ ತಡೆಯಲು ಸರ್ಕಾರ (Government) ಸಹ ಮುಂಜಾಗ್ರತ ಕ್ರಮಗಳನ್ನು (Precautionary Measures) ಕೈಗೊಂಡಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲೂ (Bengaluru) ಸಹ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಹೀಗಾಗಿ ಕೋವಿಡ್ ನಾಲ್ಕನೇ ಅಲೆಯ ವಿರುದ್ಧ ಹೋರಾಡಲು ಬಿಬಿಎಂಪಿ (BBMP) ಮುಂದಾಗಿದೆ. ಇಂದಿನಿಂದ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ ಎಂದು ತಿಳಿಸಿದೆ. ಈಗಾಗಲೇ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಹಾಕದಿದ್ರೆ 250 ರೂಪಾಯಿ ದಂಡ ವಿಧಿಸಿಸುವುದಾಗಿ ಘೋಷಿಸಿದೆ.