Publish Date: Tue, 24 Oct 2023 (12:42 IST)
Updated Date: Tue, 24 Oct 2023 (12:44 IST)
ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಸ್ತೆ ಗುಂಡಿಗಳು ಪ್ರತ್ಯಕ್ಷವಾಗಿದ್ದು, ಕೋಟಿ ಕೋಟಿ ಸುರಿದ್ರೂ ಗುಂಡಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು BBMP ಟೆಂಡರ್ ಕರೆದಿದೆ. ಬೆಂಗಳೂರಿನಲ್ಲಿ ವಿಧಾನಸಭಾ ಕ್ಷೇತ್ರವಾರು ಗುಂಡಿ ಮುಚ್ಚಲು ಪಾಲಿಕೆ 33 ಕೋಟಿ ಟೆಂಡರ್ ಕರೆದಿದೆ. ಕಳೆದ ವರ್ಷ ರಸ್ತೆ ಗುಂಡಿ ಮುಚ್ಚಲು 50 ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ ರಸ್ತೆ ಗುಂಡಿ ಮುಚ್ಚಲು 33 ಕೋಟಿ ನಿಗದಿ ಮಾಡಲಾಗಿದೆ.ಮೊದಲ ಹಂತದಲ್ಲಿ 14 ವಿಧಾನಸಭಾ ಕ್ಷೇತ್ರಗಳಲ್ಲಿ ಗುಂಡಿ ಮುಚ್ಚಲು ಹಣ ನಿಗದಿ ಮಾಡಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗುಂಡಿ ಮುಚ್ಚಲು 3.6 ಕೋಟಿ ನಿಗದಿ ಮಾಡಲಾಗಿದೆ.