ಹಳ್ಳಿ ಪ್ರದೇಶಗಳಲ್ಲಿಯೇ 20 ರೂ.ಗೆ ಏನೂ ಸಿಗಲ್ಲ. ಅಂಥದ್ದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇವಲ 20 ರೂ.ಗಳಿಗೆ ಕಟ್ಟಡ ಬಾಡಿಗೆ ನೀಡಿ ಆದೇಶ ಹೊರಡಿಸಿದೆ. ಇದರ ವಿರುದ್ಧ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.
ಬಿಬಿಎಂಪಿ ಮತ್ತೊಂದು ಯಡವಟ್ಟು ಹಾಗೂ ಗೋಲ್ ಮಾಲ್ ಬಹಿರಂಗಗೊಂಡಿದೆ. ಪ್ರತಿ ಚದರ ಅಡಿಗೆ 20 ಸಾವಿರ ಬಾಡಿಗೆ ಇರುವ ಪ್ರದೇಶದಲ್ಲಿ ಕಾನೂನು ಮೀರಿ ಕೇವಲ 20 ರೂ.ಗೆ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣ ಕುರಿತು ಗರಂ ಆಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಗೋಲ್ ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಎಂಜಿ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಕ್ಯಾನೊಪಿ ಎಂಬ ಹೊಟೇಲ್ ಗೆ ಪಾಲಿಕೆಯಿಂದ ಗುತ್ತಿಗೆ ಕೊಡಲಾಗಿದೆ. ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿಯವರು ನಿರ್ಣಯ ಕೈಗೊಂಡು ಮೇಯರ್ ರಿಂದ ಅನುಮೋದನೆ ಪಡೆದು ಕ್ಯಾನೊಪಿ ಹೊಟೇಲ್ ಗೆ ಕಡಿಮೆ ದರದಲ್ಲಿ ಬಾಡಿಗೆ ಗುತ್ತಿಗೆ ನೀಡಿದ್ದಾರೆ.