ಬೆಂಗಳೂರು : ಬೆಂಗಳೂರಿನಲ್ಲಿ ಸ್ವಚ್ಚತೆ ಕಾಪಾಡಲು ಬಿಬಿಎಂಪಿ ಹೊಸ ಪ್ಲ್ಯಾನ್ ವೊಂದನ್ನು ಮಾಡಿದ್ದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ತಡೆಗೆ ಕನ್ನಡಿ ಅಳವಡಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಜನರು ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಿರುವುದರಿಂದ ಇದನ್ನು ತಡೆಯಲು ಬಿಬಿಎಂಪಿ ಸಿಬ್ಬಂದಿ ನಗರದ ಹಲವೆಡೆ ಕನ್ನಡಿ ಅಳವಡಿಸಿದ್ದಾರೆ.
ಕನ್ನಡಿ ಅಳವಡಿಸಿದ ಜಾಗದಲ್ಲಿ ಯಾರೂ ಮೂತ್ರ ವಿಸರ್ಜಿಸಲ್ಲ. ಕನ್ನಡಿಯಲ್ಲಿ ತಮ್ಮ ಮುಖ ತಾವೇ ನೋಡಿ ನಾಚಿಕೊಳ್ಳುತ್ತಾರೆ. ಗಲೀಜು ಮಾಡಲು ಬಂದವರು ಕನ್ನಡಿ ನೋಡಿ ವಾಪಾಸಾಗ್ತಾರೆ. ಇದರಿಂದ ಬೆಂಗಳೂರಿನ ಸ್ವಚ್ಚತೆ ಕಾಪಾಡಬಹುದೆಂದು ಪ್ಲ್ಯಾನ್ ಮಾಡಿದ ಬಿಬಿಎಂಪಿ ಹೀಗಾಗಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ , ಇಎಸ್ ಐ ಆಸ್ಪತ್ರೆ ಸೇರಿದಂತೆ ಹಲವೆಡೆ ಕನ್ನಡಿ ಅಳವಡಿಸಿದೆ.