ವಿವಿ ಪುರಂ ನ ಫುಡ್ ಸ್ಟ್ರೀಟ್ ಗೆ ಹೊಸ ಟಚ್ ಕೊಡಲು ಬಿಬಿಎಂಪಿ ಪ್ಲಾನ್ ಮಾಡಿದೆ.ನಾಳೆ ಬಿಬಿಎಂಪಿಯಿಂದ ಹನ್ನೊಂದು ಗಂಟೆಗೆ ಗುದ್ದಲಿ ಪೂಜೆ ಮಾಡಲಿದ್ದಾರೆ .ವಿವಿ ಪುರಂನ ತಿಂಡಿ ಬೀದಿಯನ್ನು ಹೊಸ ರೂಪ ನೀಡಲು ಬಿಬಿಎಂಪಿ ತಯಾರಿ ಮಾಡಿಕೊಂಡಿದೆ.
ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ತಿಂಡಿ ಬೀದಿ ಗೆ ಪ್ಲಾನ್ ಮಾಡಿದೆ.ಪ್ರಸ್ತುತ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ.ಪ್ರತಿನಿತ್ಯ ಸಾವಿರಾರು ಜನರು ಫುಎ್ ಸ್ಟ್ರೀಟ್ ಗೆ ಆಗಮಿಸುತ್ತಾರೆ .2೦೦ ಮೀಟರ್ ವ್ಯಾಪ್ತಿಯಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಮಳಿಗೆಗಳಿವೆ.ಹಾಗಾಗಿ ಸುಮಾರು ನಾಲ್ಕು ತಿಂಗಳಲ್ಲಿ ಪರಿವರ್ತಿಸಲು ಪ್ಲಾನ್ ಮಾಡಿದೆ.ಸುಸಜ್ಜುತವಾದ ತಿಂಡಿ ಬೀದಿಯನ್ನು ನೋಡಲು ನಾಲ್ಕು ತಿಂಗಳು ಕಾಯಬೇಕು.ಹೊಸದಾಗಿ ಪಾದಾಚಾರಿ ಸ್ನೇಹಿ ಸ್ಥಳಗಳನ್ನು ನಿರ್ಮಿಸುವುದು.ಜನಸಂದಣಿ ತಗ್ಗಿದಲು ಹೆಚ್ಚುವರಿ ಆಸನಕ್ಕೆ ವ್ಯವಸ್ಥೆ ಮಾಡುವುದು.ವೇ ಫೈಂಡಿಂಗ್ ಎಲಿಮೆಂಟ್ಸ್ ಸಾಂಸ್ಕೃತಿಕ ಹಾಗೂ ಸ್ಥಳೀಯ ಅಂಶಗಳನ್ನು ಪರಿಚಯಿಸುವುದು,ಕೈ ತೊಳೆಯುವ ಸೌಲಭ್ಯಗಳನ್ನು ಮತ್ತು ಸ್ಥಿರ ನಿಂತಿರುವ ಟೇಬಲ್ ಗಳಂತಹ ಬೀದಿ ಪೀಠೋಪಕರಣಗಳ ಅಳವಡಿಕೆ ಮಾಡಲು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ಹೇಳಿದ್ದಾರೆ.