Publish Date: Sat, 08 Apr 2023 (16:10 IST)
Updated Date: Sat, 08 Apr 2023 (15:57 IST)
ಮಾಜಿ ಸಿಎಂ B.S. ಯಡಿಯೂರಪ್ಪ BJP ಏಳ್ಗೆಗಾಗಿ ಅವಿರತ ಪ್ರಯತ್ನ ಪಟ್ಟವರು. ಅವರ ಮಾತನ್ನ BJPಯಲ್ಲಿ ಯಾರೂ ಅಲ್ಲಗಳೆಯುವುದಿಲ್ಲ.. ಕಳೆದ ಬಾರಿಯ ಎಲೆಕ್ಷನ್‌ನಲ್ಲಿ ಬಾಗಲಕೋಟೆಯ ಜಮಖಂಡಿ ಕ್ಷೇತ್ರಕ್ಕೆ ಬಸವರಾಜ್ ಸಿಂಧೂರಗೆ BJP ಹೈಕಮಾಂಡ್ ಟಿಕೆಟ್ ನೀಡದೇ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ನೀಡಿತ್ತು.. ಇದರಿಂದ ಬಸವರಾಜ್ ಸಿಂಧೂರ ಮುನಿಸಿಕೊಂಡಿದ್ರು.. ಆದರೆ ಮುಂದಿನ ಬಾರಿ ನಿಮಗೆ ಟಿಕೆಟ್ ಪಕ್ಕಾ ಕೊಡಿಸುವೆ ಎಂದು ರಾಜಾಹುಲಿ BSY ಭರವಸೆ ನೀಡಿ, ಮನವೊಲಿಸಿದ್ರು.. ಇದೀಗ ಜಮಖಂಡಿ ಕ್ಷೇತ್ರಕ್ಕೆ ಬಸವರಾಜ್ ಸಿಂಧೂರ ಟಿಕೆಟ್ ಬೇಡಿಕೆ ಇಟ್ಟಿದ್ದು, ಇದೀಗ ಕೊಟ್ಟ ಮಾತಿನಿಂತೆ ಯಡಿಯೂರಪ್ಪ ಬಸವರಾಜ್ ಸಿಂಧೂರರಿಗೆ ಟಿಕೆಟ್ ಕೊಡಿಸ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.. ಈ ಬಾರಿ ಕೇಂದ್ರ ಬಿಜೆಪಿ ಚುನಾವಣೆ ಸಮಿತಿಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಇದ್ದು, ಬಸವರಾಜ್ ಸಿಂಧೂರಗೆ ಟಿಕೆಟ್ ಸಿಗುತ್ತಾ ಎಂಬುದು ಚರ್ಚೆಯ ವಿಷಯವಾಗಿದೆ. ಸದ್ಯ ಜಮಖಂಡಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಸವರಾಜ್ ಸಿಂಧೂರ, ಜಗದೀಶ ಗುಡಗುಂಟಿ, ಉಮೇಶ ಮಹಾಬಳಶೆಟ್ಟಿ ಮಧ್ಯೆ ತೀವ್ರ ಪೈಪೋಟಿ ಇದೆ.