Publish Date: Monday, 19 September 2022 (16:44 IST)
Updated Date: Monday, 19 September 2022 (17:47 IST)
ಫುಟ್ ಬಾಲ್ ಕ್ಲಬ್ ಮಡಿಲಿಗೆ ಮುಡಿಗೇರಿದೆ. ಕೊಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಫುಟ್ ಬಾಲ್ ಕ್ಲಬ್ ಅನ್ನ ಬೆಂಗಳೂರು ಕ್ಲಬ್ ನಾಯಕ ಸುನೀಲ್ ಚೆಟ್ರಿ ನೇತ್ರತ್ವದ ತಂಡ 2-1 ಅಂತರದಲ್ಲಿ ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕೇರಿತು.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಚಾಂಪಿಯನ್ ತಂಡದ ನಾಯಕ ಸುನೀಲ್ ಚೆಟ್ರಿ ಪ್ರಶಸ್ತಿ ಪಡೆದ್ರರು. ಈ ವೇಳೆ ಮಣಿಪುರ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಲಾ ಗಣೇಶನ್ ನಾಯಕ ಚೆಟ್ರಿಯನ್ನ ಪಕ್ಕಕ್ಕೆ ತಳಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಜ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತ ರಾಜ್ಯಪಾಲರು ಬೇಕಂತಲೇ ಪೋಟೋಗೆ ಫೋಸ್ ಕೊಡಲು ಹೀಗೆ ಮಾಡಿದ್ದಾರೆಂದು ಚೆಟ್ರಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.