ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಮೊನ್ನೆ ರಾತ್ರಿ ನಡೆದ ಗಲಭೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಂದ ಪುಂಡರಿಂದಲೇ ನಷ್ಟ ವಸೂಲಿ ಮಾಡುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನೂರಾರು ವಾಹನಗಳು, ಮನೆಗಳಿಗೆ ಬೆಂಕಿ ಹಚ್ಚಿ ಸಾಕಷ್ಟು ಹಾನಿ ಮಾಡಿದ್ದ ಪುಂಡರ ಆಸ್ತಿ ಜಪ್ತಿ ಮಾಡಿ ಅದರಿಂದಲೇ ಸಾರ್ವಜನಿಕರಿಗಾದ ನಷ್ಟ ಪರಿಹಾರ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಪ್ರಕರಣ ಸಂಬಂಧ 160 ಮಂದಿಯನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿಯ ಬಂಧನವಾಗಲಿದೆ. ಘಟನೆಯಲ್ಲಿ 70 ಕ್ಕೂ ಅಧಿಕ ವಾಹನಗಳು ಭಸ್ಮವಾಗಿದೆ ಎನ್ನಲಾಗಿದೆ.