Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೆಕ್ ಪೋಸ್ಟ್ ಪರಿಶೀಲಿಸಿದ ಬೆಂಗಳೂರು ಡಿಸಿ

ಚೆಕ್ ಪೋಸ್ಟ್ ಪರಿಶೀಲಿಸಿದ ಬೆಂಗಳೂರು  ಡಿಸಿ
ಬೆಂಗಳೂರು , ಶುಕ್ರವಾರ, 7 ಜನವರಿ 2022 (16:49 IST)
ದೇಶದಲ್ಲಿ ಕೋವಿಡ್ ರಣ ಕೇಕೆ ಹಾಕಿತ್ತಿರುವುದರಿಂದ ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯ ಸಲುವಾಗಿ ಕರೋನಾ ತಡೆಗಟ್ಟಲು ರಾಜ್ಯದಲ್ಲಿ ವಾರದಲ್ಲಿ ಎರಡು ದಿನ ವಿಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಅಲ್ಲದೆ ಕರೋನಾ ತಡೆಗಟ್ಟಲು ಗಡಿ ಭಾಗಗಳಲ್ಲಿ ರಾಜ್ಯ ಸರ್ಕಾರ ಚೆಕ್ ಪೋಸ್ಟ್ ಗಳಲ್ಲಿ ಬೇರೆ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಲಿದೆ
.ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಕರ್ನಾಟಕ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಆನೇಕಲ್ ನ ಅತ್ತಿಬೆಲೆ ಚೆಕ್ ಪೋಸ್ಟ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
 
ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಆರೋಗ್ಯ ಪೊಲೀಸ್ ಕಂದಾಯ ಇಲಾಖೆಯೊಂದಿಗೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ವಾಹನ ತಪಾಸಣೆಗೆ 200 ಕ್ಕೂ ಹೆಚ್ಚು ಪೊಲೀಸರೊಂದಿಗೆ 200 ಕ್ಕೂ ಹೆಚ್ಚು ಹೋಮ್ ಗಾರ್ಡ್ ಸಿಬ್ಬಂದಿಯನ್ನು ಚೆಕ್ ಪೋಸ್ಟ್ ಗಳಿಗೆ ನಿಯೋಜನೆ ಮಾಡಲಾಗುವುದು ಎಂದರು. ಇನ್ನು ಓಂ ಶಕ್ತಿ ಶಬರಿ ಮಲೆಗೆ ಹೋಗಿ ರಾಜ್ಯಕ್ಕೆ
 
ಬರುವ ಯಾತ್ರಾರ್ಥಿಗಲಿಗೆ ಆರ್.ಟಿ.ಪಿ.ಸಿ.ಆರ್ ರಿಪೋರ್ಟ್ ಕಡ್ಡಾಯವಾಗಿದ್ದು, ಈಗಾಗಲೇ ಕೈಗಾರಿಕೆಗಳಲ್ಲಿ 50 ರಷ್ಟು ಸಿಬ್ಬಂದಿಗಳು ಮಾತ್ರ ಕೆಲಸ ಮಾಡಲು ಅನುಮತಿ ನೀಡಲಾಗಿದ್ದು, ಕೈಗಾರಿಕೆಗಳಲ್ಲಿ ಯಾವುದೇ ಹಂತದ ಕೆಲಸಗಾರರದ್ರೂ 2 ಡೋಸ್ ವ್ಯಾಕ್ಸ್ ನೇಷನ್ ಹಾಕಿಸಿಕೊಂಡಿದ್ದರೆ ಮಾತ್ರ ಕೆಲಸಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ವೃತಿಪರ ಕಾಲೇಜು ಒಪೆನ್