Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸೀಂ ಪಠಾಣ್ನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ವಾಸೀಂ ಪಠಾಣ್ನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆತನಿಗೆ ಯಾರೂ ಕೂಡಾ ಜಾಮೀನು ನೀಡಲು ಮುಂದಾಗಿಲ್ಲ. ದೇಶದ್ರೋಹ ಮಾಡಿದವನ ಪರವಾಗಿ ಯಾರೂ ಕೂಡ ವಕಾಲತ್ತು ವಹಿಸದೇ ಇರುವುದು ನಿಜಕ್ಕೂ ಖುಷಿ ವಿಷಯ ಎಂದು ಹುಬ್ಬಳ್ಳಿಯ ಹಿರಿಯ ನ್ಯಾಯವಾದಿ ಅಶೋಕ್ ಅಣ್ವೇಕರ್ ಹೇಳಿದರು. ಈತನ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಯಲಿದೆ.