Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಟಲ್ ಬಿಹಾರಿ ವಾಜಪೇಯಿ. ಉದ್ಯಾನವನ ನಿರ್ಮಾಣ

ಅಟಲ್ ಬಿಹಾರಿ ವಾಜಪೇಯಿ. ಉದ್ಯಾನವನ ನಿರ್ಮಾಣ
ಬೆಂಗಳೂರು , ಶುಕ್ರವಾರ, 4 ಮಾರ್ಚ್ 2022 (14:57 IST)
ಯಲಹಂಕ ಬಳಿಯ ಜಾರಕಬಂಡೆ ಕಾವಲ್ ಪ್ರದೇಶದ 350 ಎಕರೆ ಸರ್ಕಾರಿ ಜಮೀನಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿಪಡಿಸಲಾಗುತ್ತದೆ.
ಬೆಂಗಳೂರು ನಗರದಲ್ಲಿ ಗ್ರೀನ್ ಸ್ಪೇಸ್‍ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಸರ್ಕಾರವು ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ವಿವಿಧೋದ್ದೇಶದ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
 
ಹನಿ ನೀರಾವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90ರಷ್ಟು ಹಾಗೂ ಇತರರಿಗೆ ಶೇ.70ರಷ್ಟು ಸಹಾಯ ಧನವನ್ನು ಒದಗಿಸಲಾಗುವುದು.ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಲು 25 ಕೋಟಿ ರೂ. ಅನುದಾನ ನೀಡಲಾಗುತ್ತದೆ.
 
ಬ್ಯಾಡಗಿಯಲ್ಲಿ ಸಾಂಬಾರ ಪದಾರ್ಥಗಳ ಸಂಶೋಧನಾ ಕೇಂದ್ರ, ಹಾನಗಲ್‍ನಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತದೆ. ಕೊಡಗು ಮತ್ತು ಜಾಂಬೋಟಿ ಜೇನು ತುಪ್ಪಗಳನ್ನು ಬ್ರ್ಯಾಂಡಿಂಗ್ ಮೂಲಕ ಜಾಗತಿಕ ಮಟ್ಟಕ್ಕೇರಿಸಲು 5 ಕೋಟಿ ರೂ. ಒದಗಿಸಲು ಪ್ರಸ್ತಾಪವನ್ನು 2022-23ನೆ ಆಯವ್ಯಯದಲ್ಲಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಭರಪೂರ