Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಇತ್ತೀಚಿನ ದಿನಗಳಲ್ಲಿ ಮನುಷ್ಯ ಎಷ್ಟೆಲ್ಲಾ ಕ್ರೂರತ್ವ ಮೆರೆಯುತ್ತಿದ್ದಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನಲ್ಲಿ ಜನವರಿ ಎರಡನೇ ತಾರೀಖಿನಂದು ನಿಬಾಶೀಶ್ ಪಾಲ್ ಎಂಬುವವನನ್ನು ರೀನಾ, ಗಂಗೇಶ್ ಹಾಗೂ ಬಿಜೋಯ್ ಕೊಲೆ ಮಾಡಿದ್ದಾರೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಬೈಕ್ನಲ್ಲಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಶವವನ್ನು ಎಸೆದು ಬಂದಿದ್ದಾರೆ. ಇದೀಗ ರೀನಾ, ಗಂಗೇಶ್ ಹಾಗೂ ಬಿಜೋಯ್ರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ನಿಬಾಶೀಶ್ ಪಾಲ್ ಹಾಗೂ ರೀನಾಗೆ ಅನೈತಿಕ ಸಂಬಂಧ ಇತ್ತು. ರೀನಾಳ ಗಂಡ ಗಂಗೇಶ್ ಉತ್ತರ ಪ್ರದೇಶದಲ್ಲಿ ವಾಸವಿದ್ದ. ನಿಬಾಶೀಶ್ ಪಾಲ್ ರೀನಾಗೆ ಕಿರುಕುಳ ಕೊಡಲು ಶುರು ಮಾಡಿದ್ದನಂತೆ. ಇದಕ್ಕೆ ಬೇಸತ್ತ ಈಕೆ ಗಂಡನನ್ನು ಕರೆಸಿದ್ದಾಳೆ. ಬಳಿಕ ಗಂಡನೊಂದಿಗೆ ಸೇರಿ ನಿಬಾಶೀಶ್ಗೆ ಕಂಠಪೂರ್ತಿ ಕುಡಿಸಿ, ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.