Publish Date: Tue, 22 Oct 2019 (11:00 IST)
Updated Date: Tue, 22 Oct 2019 (11:02 IST)
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಮುಂದಾಗುತ್ತಿದ್ದ ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರ ಜೀವ ಉಳಿದಿದೆ.
ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಗಿರಿಯಾಲದಿಂದ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಬಸ್ ಇದ್ದಾಗಿದ್ದು, ಚನ್ನಾಪುರ ಗ್ರಾಮದ ಕೆರೆ ಪಕ್ಕದ ರಸ್ತೆಯಲ್ಲಿ ಬರುವಾಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಏಕಾಏಕಿ ರಸ್ತೆ ಕುಸಿದಿದೆ.
ಹೀಗಾಗಿ ರಸ್ತೆ ಕುಸಿದ ಪರಿಣಾಮ ಬಸ್ ಪಲ್ಟಿಯಾಗುವ ಸಂಭವ ಕಾಣಿಸಿದೆ. ಇದನ್ನು ಗಮನಿಸಿದ ಸಾರಿಗೆ ಬಸ್ ಡ್ರೈವರ್ ಬೃಹತ್ ತಗ್ಗಿಗೆ ಬಸ್ ಬೀಳುವುದನ್ನು ತನ್ನ ಸಮಯ ಪ್ರಜ್ಞೆಯಿಂದ ನಿಯಂತ್ರಿಸಿ ತಪ್ಪಿಸಿದ್ದಾನೆ.
ಇದರಿಂದಾಗಿ ಮುಂದಾಗುತ್ತಿದ್ದ ಭಾರಿ ಅನಾಹುತ ತಪ್ಪಿದಂತಾಗಿದ್ದು, ಬಸ್ಸಿನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಜೀವ ಉಳಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಬಸ್ಸಿನ ಚಾಲನಕ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.