ಜನಾರ್ಧನ ರೆಡ್ಡಿ ಬಿಜೆಪಿಗೆ ಕರೆತರುವ ವಿಚಾರವಾಗಿ ಎಲ್ಲರೂ ಬಂದ್ರೆ ಒಳ್ಳೆಯದು ಅಂತ ಹೇಳಿದ್ದೆ.ಅವರು ಪತ್ರಕರ್ತರ ಬಳಿ ಹೇಳಿದ್ರಂತೆ ಬಿಜೆಪಿ ನನಗೆ ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ.ಬಿಜೆಪಿಗೆ ಯಾರೇ ಬಂದ್ರೂ ಸ್ವಾಗತ.ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ನನಗೆ ಪಕ್ಷ ವಿಲೀನ ಬಗ್ಗೆ ಮಾಹಿತಿ ಇಲ್ಲ.ಅವರು ಪಕ್ಷಕಟ್ಟಿದ್ದಾರೆ, ಬಿಜೆಪಿಗೆ ವಿಲೀನ ಆಗುವ ಮಾಹಿತಿ ನನ್ನ ಬಳಿ ಇಲ್ಲ.ನಮ್ಮ ಬಳಿ ಯಾವುದೇ ವಿಲೀನ ಚರ್ಚೆ ನಡೆದಿಲ್ಲ.ಅಲಯನ್ಸ್ ಮಾಡಿಕೊಂಡು ಲೋಕಸಭೆ ಚುನಾವಣೆ ಹೋಗುವ ಮಾಹಿತಿ ಇಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.
ಮಾಗಡಿ ಶಾಸಕ ಬಾಲಕೃಷ್ಣ ಬಿಜೆಪಿಯವರು ಬ್ರಿಟೀಷರು ಎಂದ ವಿಚಾರವಾಗಿ ಮಾಗಡಿ ಬಾಲಕೃಷ್ಣ ಅವರು ನಮ್ಮಪಕ್ಷದಲ್ಲೇ ಇದ್ಸವರು.ಅವರೇನು ಬೇರೆಯವರು ಅಲ್ಲ.ಬಹುಷ ಅವರಿಗೆ ಬಿಜೆಪಿಯನ್ನ ಬ್ರಿಟೀಷರಿಗೆ ಹೋಲಿಸಿದ್ದಾರೆ.ನಮ್ಮ ಪಕ್ಷ ಅನ್ನೋದು ಒಂದು ರೀತಿ ಸರ್ವ ಧರ್ಮಗಳಿಗೆ ನ್ಯಾಯ ಕೊಡಿಸುವ ಕೆಲಸಮಾಡಿದೆ.ಅವರು ಹಿಂದೆ ಇದ್ದಾಗ ಹೇಗಿತ್ತೋ, ಈಗಲೂ ಹಾಗೆಯೇ ಇದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಉಮಾಪತಿ ಆಡಿಯೋ ವಿಚಾರವಾಗಿ ಉಮಾಪತಿ ಆಡಿಯೋ ವಿಚಾರ ನೋಡಿಲ್ಲ.ವರ್ಗಾವಣೆ, ಭ್ರಷ್ಟಾಚಾರ ನಡೆಯುತ್ತಿರೋದು ನೂರಕ್ಕೆ ನೂರು ಸತ್ಯ.ಸ್ವತಃ ಸಿಎಂ ಪುತ್ರನೇ ಮಾತಾಡಿದ್ರು.ಸಿಎಂ ಅದನ್ನ ಬೇರೆ ವಿಚಾರ ಸಿಎಸ್ಆರ್ ಫಂಡ್ ಅಂದ್ರು.ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಹೆಸರು ಕಾಣಿಸಿಕೊಂಡಿದೆ.ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ವರ್ಗಾವಣೆ ದಂಧೆಯಲ್ಲಿ ಮುಳಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.