ಬಿಜೆಪಿಕಾರ್ಯಕರ್ತ ಪ್ರವೀಣ್ ಕೊಲೆಯನ್ನ ವಾಟಾಳ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಗೌರಿಲಂಕೇಶ್, ಕಲ್ಬುರ್ಗಿ ಸೇರಿದಂತೆ ಅನೇಕರ ಹತ್ಯೆಯಾಗಿದೆ. ಇತ್ತೀಚೆಗೆ ಚಂದ್ರಶೇಖರ್ ಸ್ವಾಮಿಗಳ ಕೊಲೆಯಾಗಿದೆ.ಆದ್ರು ಸರಿಯಾದ ರೀತಿಯಲ್ಲಿ ತನಿಖೆ ನಡೆದಿಲ್ಲ.ಕರ್ನಾಟಕ ಕೊಲೆಯ ರಾಜ್ಯ ಆಗಬಾರದು .ಎಲ್ಲ ಹತ್ಯೆಯ ಸಂಚು ಮಾಡಿದವರನ್ನ ಕೂಡಲೇ ಬಂಧಿಸಬೇಕು. ಪ್ರವೀಣ್ ಹತ್ಯೆ ಕೇಸ್ ನಲ್ಲಿಯೂ ಸೂಕ್ತ ತನಿಖೆಯಾಗಬೇಕು.
ಅಶಾಂತಿ ಮೂಡಿಸುವಂತಹ ಯಾವುದೇ ರಾಜಕಾರಣಿ ಆಗಿರಲಿ ಅಥವಾ ಗಣ್ಯವ್ಯಕ್ತಿ ಯಾಗಿರಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದರೆ ಅಂತಹ ವ್ಯಕ್ತಿಯನ್ನು ನಮ್ಮ ರಾಜ್ಯದಿಂದ ಗಡಿಪಾರು ಮಾಡಬೇಕು. ಯಾವುದೇ ಧರ್ಮದ ವ್ಯಕ್ತಿಗಳ ಆಗಿರಲಿ ಕೊಲ್ಲುವುದರ ಮಟ್ಟಿಗೆ ಆಲೋಚನೆ ಮಾಡಿದರೆ ಅಂತಹ ಕಟುಕರನ್ನು ಗಲ್ಲಿಗೇರಿಸಬೇಕು.
ಪೊಲೀಸ್ ಇಲಾಖೆ ಹಾಗೂ ಸರ್ಕಾರ ಈ ಕೂಡಲೇ ಹೊಸ ನಿಯಮವನ್ನು ಜಾರಿ ಮಾಡಬೇಕು.
ಉನ್ನತಮಟ್ಟದ ತನಿಖೆ ಆಗಬೇಕು ಸರ್ವ ಜನಾಂಗದ ಶಾಂತಿಯ ತೋಟ ವಾದ ನಮ್ಮ ನಾಡು ನೆಮ್ಮದಿಯ ಬಿಡು ಆಗಿರಬೇಕು
ಕೊಲೆ ಮಾಡುವ ಹಂತಕ್ಕೆ ಯಾರೇ ಹೋದರು ಅಂತಹವರಿಗೆ ಕಠಿಣವಾದ ಶಿಕ್ಷೆ ಆಗಲೇಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದಾರೆ.