Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದ್ದು, ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ಎಲ್‌ಪಿಜಿ ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ದೇಶೀಯ ಅಡುಗೆ ಅನಿಲ (Domestic LPG cylinder) ಖರೀದಿಗಾಗಿ 949.50 ರೂ. ಪಾವತಿಸಬೇಕಾಗುತ್ತದೆ ಮತ್ತು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಖರೀದಿಸಲು 976 ರೂ. ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 926 ರೂ. ಆಗಿತ್ತು. ಇದಲ್ಲದೇ ಚೆನ್ನೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 915.50 ರೂ.ನಿಂದ 965.50 ರೂ.ಗೆ ಹೆಚ್ಚಳವಾಗಿದೆ.