Publish Date: Fri, 03 Nov 2017 (12:08 IST)
Updated Date: Fri, 03 Nov 2017 (12:12 IST)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಅಮರ್ ಜ್ಯೋತಿ ನಗರದಲ್ಲಿರೋ ಮಾರ್ಷಲ್ ಆರ್ಟ್ಸ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ.
ಮಾರ್ಷಲ್ ಆರ್ಟ್ ಕಲೆಯ ಟೆಕ್ವಾಂಡೋ ತರಬೇತುದಾರ ದೇಬಬ್ರತ ದತ್ತ ಮಹಿಳೆ ಮೇಲೆ ಅತ್ಯಾಚಾರಾ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಮಹಿಳೆ ಸಹ ಇದೇ ಸ್ಕೂಲ್ ನಲ್ಲಿ ಸಹ ತರಬೇತುದಾರಳಾಗಿದ್ದಳು ಎನ್ನಲಾಗಿದೆ.
ಮಹಿಳೆಯನ್ನ ವಶೀಕರಣ ಮಾಡಿಕೊಂಡು ಅತ್ಯಾಚಾರ ನಡೆಸಿದ್ದು, ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ದೇಬಬ್ರತ ದತ್ತ ಪರಾರಿಯಾಗಿದ್ದಾನೆ.