Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಂಗ್ರೆಸ್ ಪ್ರತಿಭಟನೆ ವೇಳೆ ನಾಯಕತ್ವದ ವಿಚಾರ ಶಾಸಕ ಜಮೀರ್ ಅಹ್ಮದ್ ಗೆ ನೋಟಿಸ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.ಸೋನಿಯಾಗಾಂಧಿ ಪರ ಬೆ೦ಗಳೂರಿನಲ್ಲಿ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಜಮೀರ್ ಹೇಳಿಕೆ ನೀಡಿದ್ದಾರೆ.ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗೆ ಶಸಕ ಟಾಂಗ್ ಶಾಸಕ ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ.ನಾಯಕತ್ವದ ವಿಚಾರದಲ್ಲಿ ಜಮೀರ್ ಇಂಥ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ.ಹಾಗಾಗಿ ಅವರಿಗೆ ಚುರುಕು ಮುಟ್ಟಿಸಬೇಕು ಎಂಬ ಒತ್ತಡ ಹಾಕಲಾಗ್ತಿದೆ.ಈ ಸಂಬಂಧ ಪಕ್ಷದ ಕೆಲ ಮುಖಂಡರು ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಸಂಪರ್ಕಿಸಿದ್ದಾರೆ ಎಂದು ಮಾಹಿತಿ ಹರಿದಡುತ್ತಿದೆ.ಇನ್ನು ಇತ್ತ ಡಿಕೆ ಶಿವಕುಮಾರ್ ಬಾಯ್ ಮುಚ್ಚಿಕೊಂಡು ಎಲ್ಲರು ಕೆಲಸ ಮಾಡಬೇಕು.ಮೊದಲು ಪಕ್ಷವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡಿ.ಐ ಆಮ್ ಟೆಲ್ಲಿಂಗ್ ಎವರಿವನ್ ನಿಮ್ಮ ನಿಮ್ಮ ಸಮುದಾಯಗಳನ್ನ ಸೆಳೆಯರಿ.ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ .ಎಲ್ಲ ೨೨೪ ಎಂಎಲ್ ಎಗಳು ಕೂಡ ಸಿಎಂ ಅಭ್ಯರ್ಥಿಯೇ ಎಂದು ಹೇಳಿದ್ದಾರೆ.