Publish Date: Thu, 31 Aug 2023 (15:00 IST)
Updated Date: Thu, 31 Aug 2023 (14:48 IST)
ಮೆಟ್ರೋ ಪ್ರಯಾಣಿಕರಿಗೆ ಬಿ ಎಂ ಆರ್ ಸಿ ಎಲ್ ಗುಡ್ ನ್ಯೂಸ್ ಕೊಟ್ಟಿದೆ.ನೇರಳೆ ಮಾರ್ಗದಲ್ಲಿ ವಾರದ 5 ದಿನದಲ್ಲಿ ಹೆಚ್ಚುವರಿ ಟ್ರಿಪ್ಗೆ ನಿರ್ಧಾರ ಮಾಡಿದೆ.ಪೀಕ್ ಅವರ್ನಲ್ಲಿ ಹೆಚ್ಚುವರಿ ಸೇವೆ ಕೊಡಲು ಬಿಎಂಆರ್ಸಿಎಲ್ ನಿರ್ಧಾರ ಮಾಡಿದ್ದು,ಸೆ.01 ರಿಂದ ಹೆಚ್ಚುವರಿ ಟ್ರಿಪ್ ಮೆಟ್ರೋ ಸೇವೆ ಆರಂಭವಾಗಲಿದೆ.ಹೆಚ್ಚುವರಿ ಟ್ರಿಪ್ ಬಗ್ಗೆ ಬಿ ಎಂ ಆರ್ ಸಿ ಎಲ್ ಮಾಹಿತಿ ನೀಡಿದೆ.ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ ಟ್ರಿಪ್ ನಮ್ಮ ಮೆಟ್ರೋ ನಡೆಸಲಿದೆ.ಮೆಜೆಸ್ಟಿಕ್ ನಿಲ್ದಾಣದಿಂದ ಎಂ.ಜಿ ರೋಡ್ವರೆಗೆ ಹೆಚ್ಚುವರಿ ಕಾರ್ಯಾಚರಣೆ ಆಗಲಿದೆ.ಬೈಯಪ್ಪನಹಳ್ಳಿಗೆ ತೆರಳುವವರು ಎಂ.ಜಿ ರೋಡ್ ನಿಲ್ದಾಣದಲ್ಲಿ ಇಳಿದು ಬಳಿಕ ಮತ್ತೊಂದು ರೈಲು ಹತ್ತಿ ತೆರಳಬಹುದು ಎಂದು ಬಿ ಎಂ ಆರ್ ಸಿ ಎಲ್ ಪ್ರಕಟಣೆ ಹೊರಡಿಸಿದೆ.