Publish Date: Sun, 07 May 2023 (13:21 IST)
Updated Date: Sun, 07 May 2023 (15:03 IST)
ಕಲಬುರಗಿ : ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ ಆಫೀಸರ್ ಅಣ್ಣಾಮಲೈ, ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ ಎಂದು ಹೇಳುತ್ತಾರೆ.
ಅವರಿಗೆ ಬುದ್ದಿ ಇದೆಯಾ ಅಥವಾ ಇಲ್ವಾ ಎಂಬುದು ಗೊತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಣ್ಣಾಮಲೈ ವಿರುದ್ಧ ಕಿಡಿ ಕಾರಿದ್ದಾರೆ. ಖರ್ಗೆ ಹತ್ಯೆ ಕುರಿತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಬೆದರಿಕೆ ಆಡಿಯೋ ಬಗ್ಗೆ ಅಣ್ಣಾಮಲೈ ಹೇಳಿಕೆ ಕುರಿತು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಐಪಿಎಸ್ ಓದಿದವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಲಿ. ಅಣ್ಣಾಮಲೈ ಡಿಸಿಪಿ ಆಗಿದ್ದಾಗ ರಾಜಕೀಯ ಒತ್ತಡದಿಂದಲೇ ಎಲ್ಲಾ ಕೇಸ್ ಮಾಡಿದ್ದಾರೆ. ಬಿಜೆಪಿಯವರು ಖರ್ಗೆ ಕುಟುಂಬದ ಬಗ್ಗೆ ತಮ್ಮ ಮನದಾಳದ ಮಾತು ಏನು ಎಂದು ಹೇಳಲಿ. ಆ ಆಡಿಯೋವನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾರೆ.