ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಜತೆ ನೇರ ಸಂಪರ್ಕ ಹೊಂದಿದ್ದ ಆರೋಪದಡಿ ಗೋವಿಂದಪುರ ಠಾಣೆ ಪೆÇಲೀಸರು ನೀಡಿದ ಮೂರನೇ ನೋಟಿಸ್ ಸ್ವೀಕರಿಸಿದ ಪ್ರೆಸ್ಟಿಜ್ ಗ್ರೂಪ್‍ಗೆನ ಅಂಜುಂ ರಜಾಕ್ ಗುರುವಾರ ವಿಚಾರಣೆಗೆ ಹಾಜರಾಗಿದ್ದರು.
ಮಾದಕ ವಸ್ತು ಸರಬರಾಜು ಮತ್ತು ಮಾರಾಟ ಆರೋಪದಡಿ ಬಂಧಿತನಾಗಿರುವ ನೈಜೀರಿಯಾದ ಥಾಮಸ್ ಕಾಲು ಜತೆ ಪ್ರೆಸ್ಟಿಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ ಅಂಜುಂ ರಜಾಕ್ ನೇರ ಸಂಪರ್ಕದಲ್ಲಿದ್ದರು. ಅಲ್ಲದೇ, ಥಾಮಸ್‍ನಿಂದ ಮಾದಕ ವಸ್ತು ತರಿಸಿಕೊಂಡು ಸೇವಿಸುತ್ತಿದ್ದರು ಎಂಬ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಗೋವಿಂದಪುರ ಠಾಣೆ ಪೆÇಲೀಸರು, ಅಂಜುಂ ರಜಾಕ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದರೆ, ಅವರು ನೋಟಿಸ್ ಸ್ವೀಕರಿಸಿದರೂ ವಿಚಾರಣೆಗೆ ಗೈರಾಗಿದ್ದರು. ಮೂರನೇ ಬಾರಿ ಪೆÇಲೀಸರು ನೀಡಿದ ನೋಟಿಸ್ ಸ್ವೀಕರಿಸಿದ ಅವರು ಠಾಣೆಗೆ ಹಾಜರಾಗಿ ಪೆÇಲೀಸರ ಎದುರು ವಿಚಾರಣೆ ಎದುರಿಸಿದ್ದಾರೆ ಎಂದು ಪೆÇಲೀಸರು ತಿಳಿಸಿದರು.
ವಿಚಾರಣೆಗೆ ಹಾಜರಾದ ಅಂಜುಂ ರಜಾಕ್ ಅವರಿಗೆ ನೈಜೀರಿಯಾ ಪ್ರಜೆ ಡ್ರಗ್ ಪೆಡ್ಲರ್ ಥಾಮಸ್ ಹೇಗೆ ಪರಿಚಯ, ಇಬ್ಬರು ಯಾವ ರೀತಿ ಸಂಪರ್ಕಿಸುತ್ತಿದ್ದರು. ಹಾಗೂ ಯಾವ ಕಾರಣಕ್ಕೆ ಸಂಪರ್ಕಿಸಿದ್ದೀರಾ, ಆತನಿಂದ ಮಾದಕ ವಸ್ತು ಖರೀದಿಸಿದ್ದೀರಾ ಎಂಬ ಹಲವು ಪ್ರಶ್ನೆಗಳನ್ನು ಕೇಳಿ ಗೋವಿಂದಪುರ ಪೆÇಲೀಸರು ಉತ್ತರ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ, ವಿಚಾರಣೆ ಬಳಿಕ ಅಂಜುಂ ರಜಾಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೋಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಏನಿದು ಪ್ರಕರಣ ?
ನೈಜೀರಿಯಾದ ಡ್ರಗ್ ಪೆಡ್ಲರ್ ಥಾಮಸ್ ಕಾಲು ಹಾಲಿನ ಪೌಡರ್ ಡಬ್ಬಗಳು ಹಾಗೂ ಪ್ಯಾಕೆಟ್‍ಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ಸರಬರಾಜು ಮಾಡುತ್ತಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಈ ರೀತಿ ಹಾಲಿನ ಡಬ್ಬಗಳಲ್ಲಿ, ಪ್ಯಾಕೆಟ್‍ಗಳಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಗೋವಿಂದಪುರ ಪೆÇಲೀಸರು ದಾಳಿ ನಡೆಸಿ ಮಾದಕ ವಸ್ತು ಸಮೇತ ಥಾಮಸ್ ಕಾಲು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ವಿಚಾರಣೆ ವೇಳೆ ಅಂಜುಂ ರಜಾಕ್ ಅವರಿಗೆ ಸಾಕಷ್ಟು ಬಾರಿ ಹಾಲಿನ ಡಬ್ಬಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಕಳುಹಿಸಿಲಾಗಿತ್ತು. ಅಲ್ಲದೇ, ಅಂಜುಂ ರಜಾಕ್ ಅವರ ಜತೆ ನಿರಂತರವಾಗಿ ವಾಟ್ಸಪ್ ಸಂಪರ್ಕದಲ್ಲಿರುವುದಾಗಿ ಥಾಮಸ್ ಕಾಲು ಒಪ್ಪಿಕೊಂಡಿದ್ದ. ಈತನ ಹೇಳಿಕೆ ಆಧಾರಿಸಿ ಅಂಜುಂ ರಜಾಕ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.