Webdunia - Bharat's app for daily news and videos

Install App

ಭಾರತದ ಪ್ರಸಿದ್ಧ 2 ದೇವಾಲಯಗಳಿಗೆ 5 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ

Sampriya
ಗುರುವಾರ, 18 ಏಪ್ರಿಲ್ 2024 (17:13 IST)
photo Courtesy Instagram
ಬೆಂಗಳೂರು: ಮಂಗಳವಾರ ಚೈತ್ರ ನವರಾತ್ರಿಯ ಅಷ್ಟಮಿಯಂದು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಅನಂತ್ ಅಂಬಾನಿ ಭೇಟಿ ನೀಡಿದ್ದರು.

ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಭಾರತದ ಎರಡು ಪ್ರಸಿದ್ಧ ದೇವಾಲಯಗಳಾದ ಅನಂತ್ ಒಡಿಶಾದ ಜಗನ್ನಾಥ ದೇವಾಲಯ ಮತ್ತು ಅಸ್ಸಾಂನ ಮಾ ಕಾಮಾಖ್ಯ ದೇವಾಲಯಕ್ಕೆ ತಲಾ 2,51 ಕೋಟಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.  

ಚೈತ್ರ ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದರು.

ರಿಲಯನ್ಸ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕ ಅನಂತ್ ಅಂಬಾನಿ ಅವರು ದೇಶದ ಅತ್ಯುನ್ನತ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಖ್ಯ ದೇವಾಲಯದ ಪರಿಕ್ರಮವನ್ನು ಸಹ ಮಾಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಆಗಾಗ್ಗೆ ಭಾರತದ ದೇವಾಲಯಗಳಿಗೆ ಭೇಟಿ ನೀಡುವುದನ್ನು ಕಾಣಬಹುದು. ಈ ವರ್ಷ, ಅಂಬಾನಿ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿ 14 ಹೊಸ ದೇವಾಲಯಗಳನ್ನು ನಿರ್ಮಿಸಲು ಅನುಕೂಲ ಮಾಡಿಕೊಟ್ಟಿತು.

ದಂಪತಿಗಳು 2022 ರಲ್ಲಿ ರಾಜಸ್ಥಾನದ ರಾಜ್‌ಸಮಂದ್‌ನಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ 'ರೋಕಾ' ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷದ ಮಾರ್ಚ್‌ನಲ್ಲಿ, ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಆಚರಣೆಗಳು ನಡೆದವು. ಮಾರ್ಚ್ 1 ರಿಂದ 3 ರವರೆಗೆ ಮೂರು ದಿನಗಳ ಪೂರ್ವ ವಿವಾಹ ಸಮಾರಂಭದಲ್ಲಿ ಹಾಲಿವುಡ್ ನಟರು, ಬಿಲಿಯನೇರ್‌ಗಳು ಮತ್ತು ಬಾಲಿವುಡ್ ತಾರೆಯರು ಸೇರಿದಂತೆ ಖ್ಯಾತನಾಮರು ಕಾಣಿಸಿಕೊಂಡಿದ್ದಾರೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments