Publish Date: Fri, 24 Feb 2023 (14:16 IST)
Updated Date: Fri, 24 Feb 2023 (14:20 IST)
ಹುಟ್ಟು ಉಚಿತ ಸಾವು ಖಚಿತ ಎಂಬುದು ತಿಳಿದಿರುವ ಸಂಗತಿ . ಸತ್ತಾಗ ನಮ್ಮ ಜೊತೆ ಏನೆನು ತಗೆದುಕೊಂಡು ಹೋಗುವುದಿಲ್ಲ ಎಂಬುದೂ ಕೂಡ ಸತ್ಯ. ಆದರೂ ಈ ಜಗ್ತಿನ ಒಂದು ಸುಂದರವಾದ ಮನೆ ಹೊಂದ ಬೇಕು ಮತ್ತು ಐಷಾರಾಮಿ ಜೀವನ ನಡೆಸಬೇಕು ಎಂದು ಎಲ್ಲರು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ , ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಈ ದಂಪತಿಗೆ ಇದಕ್ಕೆ ಹೊರತಾಗಿದ್ದಾರೆ. ತಮಗಾಗಿ ಸುಂದರವಾದ ಮನೆಯನ್ನು ಕಟ್ಟಿಕೊಳ್ಳುವ ಬದಲಾಗಿ ಬದುಕಿರುವಾಗಲೇ ನಮಗೋಸ್ಕರ ಸಮಾಧಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ವಿಚಿತ್ರಾ ಕಾರಣದಿಂದಾಗಿ ಈ ದಂಪತಿ ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಯ ವಿಷಯವಾಗಿದ್ದಾರೆ. ವಿವರಣೆಗೆ ಬರುವುದಾದರೆ, ಲಕ್ಷ್ಮಣ್ ಭುಯಾನ್ (80) ಮತ್ತು ಅವರ ಪತ್ನಿ ಜೆಂಗಿ ಭುಯಾನ್ (70) ಗಜಪತಿ ಜಿಲ್ಲೆಯ ನೌಗರ್ಹ್ ಬ್ಲಾಕ್ ಅಡಿಯಲ್ಲಿ ಬರುವ ಸೌರ ಗ್ರಾಮದಲ್ಲಿ ಸೀಟಿನ ಮನೆಯಲ್ಲಿ ವಾಸವಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳು ಹಾಗೂ ಸೊಸೆ ಮತ್ತು ಅಳಿಯಂದಿರು ಇದ್ದರು ದೋಪತಿ ಏಕಾಂಗಿ ಜೀವನ ಕಳೆಯುತ್ತಿದ್ದಾರೆ.