Publish Date: Mon, 22 Apr 2019 (16:41 IST)
Updated Date: Mon, 22 Apr 2019 (16:42 IST)
ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ರಾಯಚೂರಿಗೆ ಆಗಮಿಸಿದ ಸಿಐಡಿ ಎಸ್. ಪಿ. ಶರಣಪ್ಪ ತನಿಖೆ ಮುಂದುವರಿಸಿದ್ದಾರೆ.
ಸಿಐಡಿ ಎಸ್. ಪಿ. ಶರಣಪ್ಪ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರೆಯಲಿದೆ.
ತನಿಖೆಯಲ್ಲಿ ಸಿಐಡಿ ಡಿವೈಎಸ್ ಪಿ ರವಿಶಂಕರ್ , ಸಿಪಿಐ ದಿಲೀಪ್ ಕುಮಾರ್ ಸೇರಿದಂತೆ ಸಿಬ್ಬಂದಿಯಿಂದ ತನಿಖೆ ನಡೆಯಲಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಶವ ಪತ್ತೆಯಾದ ಸ್ಥಳವನ್ನು ಮತ್ತೆ ಪರಿಶೀಲನೆ ನಡೆಸಿದ್ದಾರೆ ಅಧಿಕಾರಿಗಳು.