Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಬಿಯರ್ ಬಾಟಲ್ ಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯೆ ಬನ್ನೂರಿನ ಬಾರ್ ವೊಂದರಲ್ಲಿ ನಡೆದಿದೆ. 29 ವರ್ಷದ ದಯಾನಂದ್ ಹಲ್ಲೆಗೊಳಗಾದ ವ್ಯಕ್ತಿ. ಬನ್ನೂರಿನ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ದಯಾನಂದ್ ವೆಹಿಕಲ್ ಲೋನ್ ಸೆಟಲ್ ಮೆಂಟ್ ಮಾಡುತ್ತಿದ್ದ ವೇಳೆ ಅಟ್ಯಾಕ್ ನಡೆಸಲಾಗಿದ್ದು, ಹಲ್ಲೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಯಾನಂದ್ ಬನ್ನೂರು ತೊರೆದು ಮೈಸೂರಿನಲ್ಲಿ ವಾಸವಿದ್ದ. 6 ತಿಂಗಳ ಹಿಂದೆ ಮತ್ತೆ ಬನ್ನೂರಿಗೆ ವಾಪಸ್ ಆಗಿದ್ದ. ಇವನು ಬಾರ್ನಲ್ಲಿರುವ ಮಾಹಿತಿ ಅರಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.