Webdunia - Bharat's app for daily news and videos

Install App

ಅಮಿತ್‌ ಶಾ ದೇಶದ ಜನರೆದುರು ಕ್ಷಮೆಕೇಳಬೇಕು: ಗದಗ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Sampriya
ಮಂಗಳವಾರ, 24 ಡಿಸೆಂಬರ್ 2024 (15:48 IST)
Photo Courtesy X
ಗದಗ: ಡಾ. ಬಿ.ಆರ್‌.ಅಂಬೇಡ್ಕರ್‌ ವಿರೋಧಿ ಹೇಳಿಕೆ ನೀಡಿದ ಗೃಹಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು, ಶಾ ಅವರು ಅಂಬೇಡ್ಕರ್‌ ಪ್ರತಿಮೆ ಎದುರಿಗೆ ಮಂಡಿಯೂರಿ ಕುಳಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಗದಗ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಂಗಳವಾರ ಬೆಳಿಗ್ಗೆ 6ಕ್ಕೆ ನಗರದ ಮುಳಗುಂದ ನಾಕಾ ಬಳಿ ಪ್ರತಿಭಟನೆ ಆರಂಭಗೊಂಡಿತು. ಪ್ರತಿಭಟನಕಾರರು ಅಮಿತ್‌ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಬಳಿಕ ನಗರದ ವಿವಿಧೆಡೆ ಬೈಕ್‌ ರ‍್ಯಾಲಿ ನಡೆಸಿ, ಕೊನೆಗೆ ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ಬಿಜೆಪಿ, ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು.

ದೇಶದಲ್ಲಿ 25ಕೋಟಿಗೂ ಮಿಕ್ಕಿರುವ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಡಾ.ಬಿ.ಆರ್‌ ಅಂಬೇಡ್ಕರ್ ದೇವರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಅವಮಾನಿಸುವುದನ್ನು ಸಹಿಸಲ್ಲ. ಅಮಿತ್‌ ಶಾ ದೇಶದ ಜನರೆದುರು ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಪ್ರತಿಭಟನೆಯ ಕಿಚ್ಚು ದೇಶವ್ಯಾಪಿಯಾಗಲಿದೆ ಎಂದು ಸಮಾವೇಶದಲ್ಲಿ ಎಚ್ಚರಿಸಲಾಯಿತು.

ದಲಿತರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ. ಅಂಬೇಡ್ಕರ್‌ ಯಾರು ಅಂತ ಅಮಿತ್‌ ಶಾಗೆ ತಿಳಿಸಿಕೊಡುತ್ತೇವೆ ಎಂದು ಹೇಳುತ್ತ ಪ್ರತಿಭಟನಕಾರರು ಜೈ ಭೀಮ್‌ ಘೋಷಣೆ ಕೂಗಿದರು. ಭೀಮ್‌ರಾವ್‌ ಅವರ ಕುರಿತಾದ ಕ್ರಾಂತಿಗೀತೆ ಮೊಳಗಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments