Publish Date: Sat, 31 Dec 2022 (10:20 IST)
Updated Date: Sat, 31 Dec 2022 (11:01 IST)
ಬೆಂಗಳೂರು : ಈ ಬಾರಿ ಒಳ ಮೈತ್ರಿಗಳಿಗೆ ಅವಕಾಶ ಇಲ್ಲ. ಒಳಮೈತ್ರಿ, ಒಳ ಒಪ್ಪಂದ ಅಂತೆಲ್ಲ ದುಸ್ಸಾಹಸ ಬೇಡ. ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ಗೆ ಅವಕಾಶ ಕೊಡ್ಲೇಬೇಡಿ.
ಯಾರೇ ಇರ್ಲಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಿದ್ರೆ ನಮಗೆ ಗೊತ್ತಾಗುತ್ತೆ. ಜೆಡಿಎಸ್ ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ ಎಂದು ಬಿಜೆಪಿ ನಾಯಕರಿಗೆ ಚುನಾವಣಾ ಚಾಣಕ್ಯ ಅಮಿತ್ ಶಾ ತಾಕೀತು ಮಾಡಿದರು.
ಹಳೇ ಮೈಸೂರು ಭಾಗದ ಪ್ರಮುಖ ನಾಯಕರ ಜೊತೆ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಮಾತನಾಡಿದ ಅಮಿತ್ ಶಾ, ಈ ಬಾರಿ ಸ್ವಂತ ಬಲದಲ್ಲಿ ಗೆಲ್ಲಲೇಬೇಕು. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆದರೆ ಮಾತ್ರ ಇದು ಸಾಧ್ಯ. ಈ ಬಾರಿ ಒಳ ಮೈತ್ರಿಗಳಿಗೆ ಅವಕಾಶ ಇಲ್ಲ.
ಒಳಮೈತ್ರಿ, ಒಳ ಒಪ್ಪಂದ ಅಂತೆಲ್ಲ ದುಸ್ಸಾಹಸ ಬೇಡ. ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ಗೆ ಅವಕಾಶ ಕೊಡ್ಲೇಬೇಡಿ. ಯಾರೇ ಇರ್ಲಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಿದ್ರೆ ನಮಗೆ ಗೊತ್ತಾಗುತ್ತೆ. ಜೆಡಿಎಸ್ ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ ಎಂದು ವಾರ್ನಿಂಗ್ ನೀಡಿದರು.